ಈಗ ಯಾವುದೇ ಮಕ್ಕಳು ಟಿವಿ ಮುಂದೆ ಕೂತರು ಹೇಳುವ ಮಾತೆಂದರೆ “ಮೋಟು-ಪತ್ಲು” ಹಾಕಿ.
ಹೌದು ಹಾಗಾದರೆ ಈ ಮೋಟು ಪತ್ಲು ಅಂದ್ರೆ ಏನು ನಿಕ್ ಅನ್ನುವ ಹಿಂದಿ ಕಾರ್ಟೂನ್ ಚಾನೇಲ್‌ನಲ್ಲಿ ಪ್ರಸಾರವಾಗುತ್ತಿರುವ ಅನಿಮೇಷನ್ ಚಿತ್ರದಲ್ಲಿ ಕಾಣಿಸಿಕೊಳ್ಳುವ ಎರಡು ಪಾತ್ರದಾರಿಗಳೇ ಈ ಮೋಟು-ಪತ್ಲು. ಒಬ್ಬ ಮಧ್ಯವಯಸ್ಕ ದಡಿಯ ಮೋಟು ಪಾತ್ರದಲ್ಲಿ ಕಾಣಿಸಿಕೊಂಡರೆ ಪತ್ಲುವಿನ ಪಾತ್ರದಲ್ಲಿ ಓರ್ವ ಬಾಲಕನಂತಿರುವ ವ್ಯಕ್ತಿ ಕಾಣಿಸಿಕೊಳ್ಳುತ್ತಾನೆ. ಇವರಿಬ್ಬರ ತರ್ಲೆಯಾಟ, ಪತ್ತೆದಾರಿ ದೃಶ್ಯಗಳು ಮಕ್ಕಳನ್ನು ಮನರಂಜಿಸುತ್ತದೆ.
ಕಳೆದ ಐದು ವರ್ಷಗಳಿಂದ ಮಕ್ಕಳನ್ನು ರಂಜಿಸುತ್ತಾ ಬಂದ ಈ ಅನಿಮೇಷನ್ ಚಿತ್ರ ಈಗ ಟಾಪ್ ಹತ್ತರಲ್ಲಿ ಕೊನೆಯ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಒಂದು ಕಾಲದಲ್ಲಿ ಟಾಮ್ ಆ್ಯಂಡ್ ಜೆರಿಗೆ ಮಾತ್ರವೇ ಹೆಸರುವಾಸಿಯಾಗಿದ್ದ ಅನಿಮೇಷನ್ ಚಿತ್ರಗಳು ಈಗ ವಿವಿಧ ರೀತಿಯ ಅನಿಮೇಷನ್ ಚಿತ್ರಗಳಿಂದ ಜನಮನ ಸೆಲೆಯುತ್ತಿದೆ. 2008ರಲ್ಲಿ ಚೋಟ ಬೀಮ್, 2012ರಲ್ಲಿ ಬಾಲ್ ವೀರ್ ಈಗ 2017ರಲ್ಲಿ ಭಾರತೀಯರು ರಚಿಸಿದ ಮೋಟು-ಪತ್ಲು ಟಾಪ್ ಲೀಸ್ಟಿನಲ್ಲಿ ಸೇರಿಕೊಂಡಿವೆ.
ಇನ್ನುಳಿದಂತೆ ಟಾಪ್ ಹತ್ತರಲ್ಲಿ ಡೋರೆಮ್ಯಾನ್, ನಿಂಜ ಹತ್ತೋರಿ, ಟೊಟ್ಟೆಮೋ, ಲಕ್ಕಿಮ್ಯಾನ್, ಮೊದಲ ಮೂರು ಸ್ಥಾನವನ್ನು ಗಳಿಸಿಕೊಂಡರೆ ಟಾಮ್ ಆ್ಯಂಡ್ ಜೆರಿ ನಂತರದ ಸ್ಥಾನವನ್ನು ಗಳಿಸಿಕೊಂಡಿದೆ..