ಕೋಝಿಕ್ಕೋಡ್: ಬಾಲುಶ್ಸೇರಿಯಲ್ಲಿ ಹೆರಿಗೆಯಾದ ಕೂಡಲೇ ತಾಯಿ ಹೆಣ್ಣುಮಗುವನ ಕೊರಳು ಕತ್ತರಿಸಿ ಕೊಂದು ಹಾಕಿದ ಹೃದಯವಿದ್ರಾವಕ ಘಟನೆ ನಡೆದಿದೆ. ಪಾರಮುಕ್ಕ್ ಎಂಬಲ್ಲಿನ ರಿನ್‍ಶಾ ಹೆಣ್ಣುಮಗುವಿಗೆ ಜನ್ಮ ನೀಡಿದ ಬಳಿಕ ಬ್ಲೇಡ್ ಉಪಯೋಗಿಸಿ ಕೊರಳು ಕತ್ತರಿಸಿದ್ದು, ಮಗು ಸತ್ತಿದೆ. ರಿನ್‍ಶಾಳನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದು ಕೋಝಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆದಾಖಲಿಸಿದ್ದಾರೆ.

ಬೆಳಗ್ಗೆ ಮೂರುಗಂಟೆಗೆ ಘಟನೆ ನಡೆದಿದೆ. ರಿನ್‍ಶಾಹೆರಿಗೆಯಾದೊಡನೆ ಹೆಣ್ಣುಮಗುವನ್ನು ಬ್ಲೇಡ್‍ನಿಂದ ಕೊರಳು ಕೊಯ್ದಿದ್ದಾಳೆ ಎಂದು ಪೊಲೀಸರು ತಿಳಿಸಿದರು. ಮಗುವಿನಳು ಕೇಳಿ ಊರವರು ಪೊಲೀಸರಿಗೆ ತಿಳಿಸಿದ್ದಾರೆ. ನಂತರ ತಾಮರಶ್ಸೇರಿ ಡಿವೈಎಸ್ಪಿಸಹಿತ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ.

ರಿನ್‍ಶಾಳನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ರಿನ್‍ಶಾ ಸಹೋದರನನ್ನು ಕೂಡ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ನಾಲ್ಕುವರ್ಷದ ಹಿಂದೆ ರಿನ್‍ಶಾಳಿಗೆ ಮದುವೆಯಾಗಿತ್ತು. ಎರಡು ವರ್ಷದ ಹಿಂದೆ ಅದು ವಿಚ್ಛೇದನದಲ್ಲಿ ಪರ್ಯಾವಸಾನ ಕಂಡಿತ್ತು. ನಂತರ ತಾಯಿ ಮತ್ತು ಸಹೋದರನ ಜೊತೆ ರಿನ್‍ಶಾ ವಾಸಿಸುತ್ತಿದ್ದಳು. ಘಟನೆಯಲ್ಲಿ ಕುಟುಂಬದವರ ಹಸ್ತವಿದೆಯೇ ಎಂದು ತನಿಖೆ ನಡೆಯುತ್ತಿದೆ.

Leave a Reply