ಹೈದರಾಬಾದ್: ಜನನಿಬಿಡ ಹೈದರಬಾದ್ ನಗರದಲ್ಲಿ ಹಾಡಹಗಲೆ ಯುವಕನೊಬ್ಬನನ್ನು ನಾಲ್ವರು ಸೇರಿ ಕ್ರೂರವಾಗಿ ಕೊಂದು ಹಾಕಿದ್ದಾರೆ. ರಾಜೇಂದ್ರ ನಗರದ ಬೀದಿಯಲ್ಲಿ ಘಟನೆ ನಡೆದಿದೆ. ಜನರು ನೋಡುತ್ತಾ ನಿಂತಿರುವಂತೆ ಕೊಡಲಿ ಉಪಯೋಗಿಸಿ ಯುವಕನನ್ನು ಕಡಿದು ಕೊಲೆ ಮಾಡಲಾಗಿದೆ. ಕಳೆದ ವರ್ಷ ಡಿಸೆಂಬರ್‍ನಲ್ಲಿ ನಡೆದ ಮಹೇಶ್ ಗೌಡ ಕೊಲೆ ಪ್ರಕರಣದ ಮುಖ್ಯಾರೋಪಿ ರಮೇಶ್ ಎಂಬಾತನ ಹತ್ಯೆ ನಡೆದಿದೆ.

ಮಹೇಶ್ ಗೌಡನ ತಂದೆ ಕೃಷ್ಣಗೌಡ, ಮಾವ ಲಕ್ಷ್ಮಣ್ ಗೌಡಸೇರಿ ರಮಶ್‍ನನ್ನು ಕೊಂದಿದ್ದಾರೆ. ಇಬ್ಬರನ್ನೂ ಪೊಲೀಸರು ಬಂಧಿಸಿದ್ದು ಅಲ್ಲಿದ್ದವರಲ್ಲಿ ಯಾರೋ ದೃಶ್ಯವನ್ನುಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಿಗೆ ಪೋಸ್ಟ್ ಮಾಡಿದ್ದಾರೆ. ರಮೇಶ್ ಸಾಯುವ ತನಕ ಕೊಡಲಿಯಿಂದ ಕಡಿಯುತ್ತಿರುವುದು ದೃಶ್ಯದಲ್ಲಿ ಕಾಣಬಹುದು.

ಘಟನೆ ನಡೆಯುತ್ತಿದ್ದಾಗ ಸಮೀಪದಲ್ಲಿ ಪೊಲೀಸ್ ವಾಹನ ಇದ್ದರೂ ಪೊಲೀಸರಲ್ಲಿ ಯಾರೂ ದುಷ್ಕರ್ಮಿಗಳನ್ನು ತಡೆಯಲು ಹೋಗಿಲ್ಲ. ಲಾಠಿ ಕೈಯಲ್ಲಿಲ್ಲದ್ದರಿಂದ ಅದನ್ನು ತರಲು ಹೋದಾಗ ಕೊಲೆ ನಡೆದಿದೆ ಎಂದು ಪೊಲೀಸಧಿಕಾರಿ ತಿಳಿಸಿದ್ದಾರೆ. ಕೆಲವರು ದುಷ್ಕರ್ಮಿಗಳನ್ನು ತಡೆಯಲು ಯತ್ನಿಸಿದರೂ ಯಶಸ್ವಿಯಾಗಿಲ್ಲ. ಹೆಚ್ಚಿನ ಮಂದಿ ದೃಶ್ಯವನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸುವುದರಲ್ಲಿ ತಲ್ಲೀನರಾಗಿದ್ದರು.

ಕಳೆದ ವಾರ ಹೈದರಾಬಾದಿನಲ್ಲೇ ಕೆಳ ಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕೆ ತಂದೆ ಮಗಳನ್ನು ಮತ್ತು ಆಕೆಯ ಪತಿಯನ್ನು ಮಚ್ಚಿನಿಂದ ಕೊಚ್ಚಿ ಕೊಂದು ಹಾಕಿದ ಘಟನೆ ನಡೆದಿತ್ತು.

Leave a Reply