ನಾಗಾ ಸಾಧುವೊಬ್ಬರನ್ನು ಮುಸ್ಲಿಮರು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಹೀಗೆ ಹರಿದಾಡುತ್ತಿರುವ ಸಂದೇಶದಲ್ಲಿ, ‘ಮುಸ್ಲಿಂ ಗುಂಪೊಂದು ಅಮಾಯಕ ಬಡ ಭಿಕ್ಷುಕನನ್ನು ಹಿಗ್ಗಾಮುಗ್ಗಾ ಥಳಿಸಿದೆ. ಬಡ ಭಿಕ್ಷುಕನನ್ನು ಈ ರೀತಿ ಹಿಂಸಿಸಿದ ಮುಸಲ್ಮಾನರನ್ನು ಶೀಘ್ರವೇ ಬಂಧಿಸಬೇಕು’ ಎಂದು ಹೇಳಲಾಗಿದೆ. ಈ ಸಂದೇಶದೊಂದಿಗೆ ವಿಡಿಯೋವೊಂದನ್ನು ಲಗತ್ತಿಸಲಾಗಿದೆ.

ಆ ವಿಡಿಯೋದಲ್ಲಿ ಯುವ ಜನರ ಗುಂಪು ಹಿರಿಯ ವ್ಯಕ್ತಿಯೊಬ್ಬರಿಗೆ ಥಳಿಸುತ್ತಿರುವ ದೃಶ್ಯವಿದೆ. ವಿಡಿಯೋವನ್ನು ಟ್ವೀಟರ್‌ನಲ್ಲಿ ಅಪ್‌ಲೋಡ್ ಮಾಡಿದ ಆರೇ ಆರು ಗಂಟೆಯಲ್ಲಿ 3,300 ಬಾರಿ ರೀಟ್ವೀಟ್ ಆಗಿದೆ. ಬಳಿಕ ಇತರೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ನಿಜಕ್ಕೂ ಮುಸ್ಲಿಂ ಯುವಕರು ವಿನಾಕಾರಣ ಬಡ ಭಿಕ್ಷುಕನನ್ನು ಹೀಗೆ ಥಳಿಸಿದ್ದರೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ,

ಯಾವುದೋ ಸುದ್ದಿಯ ವಿಡಿಯೋವನ್ನು ಇನ್ಯಾವುದೋ ಅರ್ಥದಲ್ಲಿ ಶೇರ್ ಮಾಡಲಾಗಿದೆ ಎಂಬುದು ಗೊತ್ತಾಗಿದೆ. ವಾಸ್ತವವಾಗಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ಇರುವುದು ನಾಗಾಸಾಧುವಲ್ಲ, ಬದಲಿಗೆ ಒಬ್ಬ ಭಿಕ್ಷುಕ. ಆತನಿಗೆ ವಿವಾಹವಾಗಿದ್ದು, 6 ಜನ ಮಕ್ಕಳಿದ್ದಾರೆ. ಆದರೆ ಭೀಕ್ಷೆ ಕೇಳಲು ಬಂದಿದ್ದ ಆತ ಟೀ ಮತ್ತು ಬಿಸ್ಕೆಟ್ ಕೊಟ್ಟ ಮಹಿಳೆಗೇ ಹಿಂಸೆ ನೀಡಿ ಅಸಭ್ಯವಾಗಿ ವರ್ತಿಸಿದ್ದಾನೆ. ಬಳಿಕ ಮಹಿಳೆಯ ಸಹೋದರರು ಭಿಕ್ಷುಕನಿಗೆ ಥಳಿಸಿದ್ದಾರೆ.

ಸದ್ಯ ಈತ ಪೊಲೀಸ್ ವಶದಲ್ಲಿದ್ದಾನೆ. ಹೀಗೆ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಭಿಕ್ಷುಕನಿಗೆ ಸ್ಥಳೀಯರು ಥಳಿಸಿದ ವಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿ ಕೋಮು ಬಣ್ಣ ನೀಡಲಾಗಿದೆ. ಇದೊಂದು ಸುಳ್ಳುಸುದ್ದಿ.

-ವೈರಲ್ ಚೆಕ್

ಕೃಪೆ : ಸುವರ್ಣ ನ್ಯೂಸ್

Leave a Reply