27 ವರ್ಷ ವಯಸ್ಸಿನ ಇಲ್ಯಾಝ್ ಶೇಖ್ ತನ್ನ ಗರ್ಭಿಣಿ ಹೆಂಡತಿಯನ್ನು ಮುಂಬೈಯ ಟ್ಯಾಕ್ಸಿನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು.

ಆದರೆ ನೂರ್ ಜಹಾನ್ ಮತ್ತು ಇಲ್ಯಾಸ್ ದಂಪತಿಗೆ ಆಘಾತವಾಗಿತ್ತು. ಯಾಕೆಂದರೆ ನೋವು ಉಲ್ಬಣಿಸಿತ್ತು. ಕ್ಯಾಬ್ ಡ್ರೈವರ್ ತನ್ನ ಕಾರಿನಲ್ಲಿ ಮಗುವನ್ನು ಹೆರಿಗೆ ಮಾಡಲು ಅವಕಾಶ ಕೊಡುವುದಿಲ್ಲ ಎಂದರು. ಕಾರನ್ನು ಬಿಟ್ಟು ಅವರು ಹೊರಗೆ ನಡೆದರು.

ದೂರದಲ್ಲಿ ಗಣೇಶ ದೇವಸ್ಥಾನವನ್ನು ಅವರು ಕಂಡರು. ದಂಪತಿಗಳು ಅದರ ಕಡೆಗೆ ನಡೆದರು. ದೇವಾಲಯದಲ್ಲಿ ತಾತ್ಕಾಲಿಕ ಹೆರಿಗೆ ಕೊಠಡಿಯನ್ನು ಅಲ್ಲಿನ ಮಹಿಳೆಯರು ನಿರ್ಮಿಸಲು ಸಹಾಯ ಮಾಡಿದರು. ಗಂಡು ಮಗುವಿನ ಹೆರಿಗೆ ಯಶಸ್ವಿಯಾಗಿ ನಡೆಯಿತು.

ಇದೊಂದು ಮಹತ್ವಪೂರ್ಣವಾದ ದಿನವಾಗಿತ್ತು ಆ ಮುಸ್ಲಿಂ ದಂಪತಿಗಳಿಗೆ. ಈ ದಿನವನ್ನು ಸ್ಮರಿಸಿಕೊಳ್ಳಲು ನೂರ್ ಜಹಾನ್ ಅವರ ಪುತ್ರನಿಗೆ ಗಣೇಶ್ ಎಂದು ಹೆಸರಿಟ್ಟರು. ವರ್ಷಗಳ ಹಿಂದೆ ಈ ಘಟನೆ ನಡೆದಿದ್ದು ಮಗು ಈಗ ಮಗು ನಡೆದಾಡುತ್ತಿರಬಹುದು.

Leave a Reply