ಇದೊಂದು ಆಶ್ಚರ್ಯಕರ ವಿಷಯ ಹೌದು.‌ ಇಂದಿನ ದಿನಗಳಲ್ಲಿ ರಾಜಕೀಯ ಪ್ರೇರಿತ ಗಲಭೆಗಳಿಗೆ ತತ್ತರಿಸಿ ಇಬ್ಭಾಗವಾಗುವ ಮನುಷ್ಯರ ಮಧ್ಯೆ ಮನಸ್ಸಿಗೆ ಹಿತವಾದ ಒಂದು ಘಟನೆ ದೂರದ ಪಶ್ಚಿಮ ಬಂಗಾಳದ ಬಸೀರಹತ್‌ನಲ್ಲಿ ನಡೆದಿದೆ.

2017 ರಲ್ಲಿ ಕಿಡಿಗೇಡಿಗಳ ಪ್ರಚೋದನಕಾರಿ ಸಂದೇಶದ ಪರಿಣಾಮ ಬಸಿರಹತ್‌ನ ಕೆಲವು ಪ್ರದೇಶಗಳಲ್ಲಿ ರಾಜಕೀಯ ಪ್ರೇರಿತ ಕೋಮು ಗಲಭೆಯಾಗಿದ್ದು, ಈ ಸಂದರ್ಭದಲ್ಲಿ ಹಲವಾರು ಹಿಂದೂ-ಮುಸ್ಲಿಮರು ಮನೆ ಮಠಗಳು ಹಾನಿಯಾಗಿ ಬೀದಿಗೆ ಬಂದಿದ್ದರು. ಇದರಲ್ಲಿ ಅಜಯ್ ಪಾಲ್ ಸಣ್ಣ ವ್ಯಾಪಾರಸ್ಥ ಕುಟುಂಬವೂ ಒಂದಾಗಿತ್ತು.

ಗಲಭೆಯ ವೇಳೆಯಲ್ಲಿ ಅಜಯ್ ಪಾಲ್ ಅವರ ಅಂಗಡಿಯನ್ನು ಧ್ವಂಸಗೊಳಿಸಿ ಸಾಮಗ್ರಿಗಳನ್ನು ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದರು.‌ ಇದರಿಂದಾಗಿ ಅಜಯ್ ಪಾಲ್ ಬೀದಿಗೆ ಬರಬೇಕಾಯಿತು. ಅಜಯ್ ಪಾಲ್ ಅವರ ಪರಿಸ್ಥಿತಿಯನ್ನು ಮನಗೊಂಡ ನೆರೆಮನೆಯ ಎಂ.ಡಿ ನೂರ್ ಇಸ್ಲಾಂ ಗಾಝಿ ಎಂಬ ವ್ಯಕ್ತಿ ಅವರ ನೆರವಿಗೆ ಬಂದರು.

ಕಳೆದುಕೊಂಡ ವ್ಯಾಪಾರವನ್ನು ಮರಳಿ ಪಡೆಯಲು ಗಾಝಿ ಅವರು ಎರಡು ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದಾರೆ ಎಂದು ಅಜಯ್ ಪಾಲ್ ‘ದಿ ಇಂಡಿಯನ್ ಎಕ್ಸ್‌ಪ್ರೆಸ್‌’ ಪತ್ರಿಕೆಯ ಜೊತೆ ಹಂಚಿಕೊಂಡಿದ್ದಾರೆ. ನಂತರ ವ್ಯಾಪಾರ ಮುಂದುವರೆಸಿದ ಪಾಲ್ ಅವರು ಎಂದಿನ ಸ್ಥಿತಿಗೆ ಮರಳಿದ್ದಾರೆ ಎಂದು ತಿಳಿದುಬಂದಿದೆ.

ಸಾಂದರ್ಭಿಕ ಚಿತ್ರ

ಇನ್ನೊಂದು ಅಚ್ಚರಿಯ ವಿಷಯವೆಂದರೆ ಗಲಭೆಗೆ ತುತ್ತಾಗಿ ಮನೆ ಮಠ ಕಳೆದುಕೊಂಡ ಬಗ್ಗೆ ಇವರಿಬ್ಬರೂ ಕೇಸು ದಾಖಲಿಸಿಲ್ಲ.‌ ಕಾರಣ ಕೇಳಿದರೆ ಮತ್ತೆ ಇಲ್ಲಿ ಕೋಮು ಗಲಭೆ ಉಂಟಾಗಿ ಇನ್ನಷ್ಟು ಹಾನಿ ಉಂಟಾಗೋದು ಬೇಡ ಎನ್ನುತ್ತಾರೆ.

Leave a Reply