ಯಾದಗಿರಿ ಜಿಲ್ಲೆಯ ಮುಸ್ಲಿಂ ಯುವಕ ಅಯ್ಯಪ್ಪ ಮಾಲೆ ಧರಿಸಿದ್ದು ಫೋಟೋ ವೈರಲ್ ಆಗಿದೆ. ಮಾತ್ರವಲ್ಲ ಆ ಯುವಕ ತಾನು ನಿಷ್ಠೆ ಮತ್ತು ಶ್ರದ್ಧೆಯಿಂದ ಅಯ್ಯಪ್ಪ ಮಾಲೆ ಧರಿಸಿರುವದಾಗಿ ಹೇಳಿದ್ದಾರೆ. ಮಹಾರಾಷ್ಟ್ರ ಮೂಲದ ಬಬ್ಲು ಆಫ್ಸರ್ ಎಂಬ ಯುವಕ ಯಾದಗಿರಿ ಜಿಲ್ಲೆಯ ಗುರು ಮಠಕಲ್ ನಲ್ಲಿ ಕಾರು ಚಾಲಕನಾಗಿ ದುಡಿಯುತ್ತಿದ್ದಾನೆ. ಹಿಂದೂ ಮುಸ್ಲಿಮರೊಂದಿಗೆ ಭಾವೈಕ್ಯ ಸಂಬಂಧ ಹೊಂದಿರುವ ಬಬ್ಲು ಅಲ್ಲಾಹನನ್ನು ಆರಾಧಿಸುವದರ ಜೊತೆಗೆ ಅಯ್ಯಪ್ಪ ಮೇಲೆಯೂ ಭಕ್ತಿಯನ್ನು ಹೊಂದಿದ್ದಾರೆ.

ಬಾಬ್ಲು ಅಫಸರ್ ಇದೇ ಮೊದಲನೇ ಬಾರಿ ಅಯ್ಯಪ್ಪ ಮಾಲಾಧಾರಣೆ ಮಾಡಿದ್ದು, 41 ದಿನಗಳ ಕಾಲ ಮಣಿಕಂಠನ ವ್ರತ ಆಚರಣೆ ಮಾಡಬೇಕಾಗುತ್ತದೆ. ಹೀಗಾಗಿ ಗುರುಮಠಕಲ್ ಪಟ್ಟಣದಲ್ಲಿರುವ ಅಯ್ಯಪ್ಪನ ಮಂದಿರದಲ್ಲಿ ಎಲ್ಲಾ ಮಾಲಾಧಾರಿಗಳ ಜೊತೆಗೆ ಬೆಳಗ್ಗೆ ಮತ್ತು ಸಾಯಂಕಾಲ ವಿಶೇಷ ಪೂಜೆಯ ಮೂಲಕ ಅಯ್ಯಪ್ಪನ ಸ್ಮರಣೆ ಮಾಡುತ್ತಿದ್ದಾರೆ.

ಕಂಪನಿ ಮಾಲಿಕ ನರೇಂದ್ರ ರಾಠೋಡ್‌ ಪ್ರೇರಣೆಯಿಂದ ಬಾಬ್ಲು 41 ದಿನಗಳ ಅಯ್ಯಪ್ಪ ಮಾಲೆ ಪ್ರಥಮ ಬಾರಿ ಧಾರಣೆ ಮಾಡಿಕೊಂಡು ಕೊಮು ಸೌಹರ್ದತೆಗೆ ಸಾಕ್ಷಿಯಾಗಿದ್ದಾರೆ. ಮೊದಲ ದಿನವೇ ಪೂಜೆ, ಪಠಣದಲ್ಲಿನಿರತನಾಗಿ ಉಳಿದ ಎಲ್ಲಅಯ್ಯಪ್ಪ ಭಕ್ತರಿಗೆ ಬೆರಗಾಗುವಂತೆ ಮಾಡಿದ್ದಾರೆ. ಅಯ್ಯಪ್ಪ ಭಕ್ತರು ಪಾಲಿಸುವ ಎಲ್ಲನೀತಿ, ನಿಯಮ ಪೂಜೆ-ಪುನಸ್ಕಾರಗಳನ್ನು ತಪ್ಪದೇ ಪಾಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here