ಇದು ನಮ್ಮ ಊರು: ಚಹಾದೊಂದಿಗೆ ಉಪಾಹಾರವಾಗಿ ತಿನ್ನುವ ಮೈಸೂರು ಬೊಂಡಾ ದಕ್ಷಿಣ ಭಾರತದ ಪ್ರಸಿದ್ಧ ಬೀದಿ ಆಹಾರವಾಗಿದೆ. ಬಿಸಿ ಬಿಸಿಯಾಗಿ ಸೇವಿಸಿದಾಗ ಇದು ಇನ್ನೂ ಉತ್ತಮ ರುಚಿಯನ್ನು ನೀಡುತ್ತದೆ. ಇದನ್ನು ತಯಾರಿಸುವುದು ಹೇಗೆ ಎಂದು ಇವತ್ತು ನೋಡೋಣ.

ಬೇಕಾಗುವ ಪದಾರ್ಥಗಳು:

  • 1 ಕಪ್ ಮೈದಾ ಹಿಟ್ಟು
  • ½ ಕಪ್ ಮೊಸರು
  • 1 ಕಪ್ ಅಕ್ಕಿ ಹಿಟ್ಟು
  • ½ ಟೀಸ್ಪೂನ್ ಜೀರಿಗೆ
  • 2-3 ಚಮಚ ಕೊತ್ತಂಬರಿ
  • 2-3 ಹಸಿರು ಮೆಣಸಿನಕಾಯಿ
  • ಎಣ್ಣೆ
  • 1 ತುಂಡು ಶುಂಠಿ
  • ಉಪ್ಪು
  • ಅಡಿಗೆ ಸೋಡಾ

ಒಂದು ದೊಡ್ಡ ಬಟ್ಟಲಿನಲ್ಲಿ ಮೈದಾ ಹಿಟ್ಟನ್ನು ಹಾಕಿ ಅದಕ್ಕೆ ಅಕ್ಕಿ ಹಿಟ್ಟು, ಮೊಸರು, ಜೀರಿಗೆ, ಹಸಿ ಮೆಣಸಿನಕಾಯಿ, ಕೊತ್ತಂಬರಿ, ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅಡಿಗೆ ಸೋಡಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಹದ ಮಾಡಿ. ಇದನ್ನು 2-3 ನಿಮಿಷಗಳ ಕಾಲ ಚೆನ್ನಾಗಿ ಹದ ಮಾಡುತ್ತಲೇ ಇರಿ. ಆ ನಂತರ ಪಾತ್ರೆಯನ್ನು ಮುಚ್ಚಿ ಸುಮಾರು 10 ನಿಮಿಷಗಳ ಕಾಲ ಹಾಗೆ ಇಡಿ. ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ನೀವು ಹದ ಮಾಡಿದ ಹಿಟ್ಟನ್ನು ಸ್ವಲ್ಪ ಸ್ವಲ್ಪ ವೇ ತೆಗೆದು ನಿಮಗೆ ಯಾವ ಸೈಜಿಗೆ ಬೇಕೋ ಆ ಸೈಜಿನ ಉಂಡೆಗಳನ್ನು ತಯಾರಿಸಿ ಬಿಸಿಯಾದ ಎಣ್ಣೆಗೆ ಹಾಕಿ. ಅದರ ಬಣ್ಣ ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿ. ನಂತರ ಹೊರ ತೆಗೆದು ಟಿಶ್ಯು ಪೇಪರ್ ಮೇಲೆ ಇಟ್ಟು ಅದರ ಎಣ್ಣೆ ಅಂಶ ಸಂಪೂರ್ಣವಾಗಿ ಎಳೆದು ತೆಗೆಯುವಂತೆ ಮಾಡಿ. ಇದೀಗ ನಿಮ್ಮ ಮೈಸೂರ್ ಬೋಂಡಾ ರೆಡಿ. ಟೊಮೆಟೊ ಸಾಸ್ ಚಟ್ನಿಯೊಂದಿಗೆ ಮೈಸೂರ್ ಬೋಂಡಾವನ್ನು ಆನಂದಿಸಿ.

Leave a Reply