ನಮೋ ಅಪ್ಲಿಕೇಶನ್ನಲ್ಲಿ ಪ್ರತಿದಿನ ಬೆಳಿಗ್ಗೆ ನಾನು ನಿಮಗೆ ನಮಸ್ತೆ ಎಂದು ಹೇಳುತ್ತೇನೆ. (ಆದರೆ) ನೀವು ಕೇವಲ ನಾಲ್ಕು ಅಥವಾ ಐದು ಜನ ಮಾತ್ರ ಪ್ರತಿಕ್ರಿಯಿಸುತ್ತೀರಿ” ಎಂದು ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮೋದಿ ಪಕ್ಷದ ಸಂಸದರಿಗೆ ಹೇಳಿದ್ದು ವರದಿಯಾಗಿದೆ.
ಸಂಸತ್ತಿನಲ್ಲಿ ಬಿಜೆಪಿ 333 ಸದಸ್ಯರನ್ನು ಹೊಂದಿದೆ – ಲೋಕಸಭೆಯಲ್ಲಿ 276, ರಾಜ್ಯಸಭೆಯಲ್ಲಿ 57 ಸದಸ್ಯರನ್ನೊಳಗೊಂಡಿದೆ.

ಬೆಳಗ್ಗಿನ ಶುಭಾಶಯದೊಂದಿಗೆ ಹಲವಾರು ಪ್ರಮುಖ ಸಂದೇಶಗಳನ್ನು ಕಳುಹಿಸಲಾಗಿದೆ. ಆದರೆ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ತಂತ್ರಜ್ಞಾನದ ಮತ್ತು ಸಾಮಾಜಿಕ ಮಾಧ್ಯಮದ ಬಗ್ಗೆ ಅತೀವ ಕಾಳಜಿ ಇರುವ ಪ್ರಧಾನಿ ಮೋದಿ ಹೇಳಿದ್ದಾರೆ.

ಮೋದಿಯವರೊಂದಿಗೆ ಯಾವುದೇ ವಿಷಯದಲ್ಲಿ ನೇರ ಸಂಪರ್ಕ ಹೊಂದಲು ಅವರು ತಾಕೀತು ಮಾಡಿದರು.

ನಮೋ ಅಪ್ಲಿಕೇಶನ್ ಮೋದಿಯವರ ಹೆಸರಿನ ಮೊದಲ ಎರಡು ಅಕ್ಷರಗಳನ್ನು ಹೊಂದಿದ್ದು, ಪ್ರಮುಖ ಸಂದೇಶಗಳನ್ನು ರವಾನಿಸಲು ಬಳಸಲಾಗುತ್ತದೆ.

Leave a Reply