ಹೊಸದಿಲ್ಲಿ: ನಾನಾಟ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ ನಟಿ ತನುಶ್ರೀ ದತ್ತ ತನಗೆ ಲಾಯರ್ ನೋಟಿಸ್ ಸಿಕ್ಕಿಲ್ಲ ಎಂದಿದ್ದಾರೆ. ನಾನಾ ಪಾಟೇಕರ್ ತನುಶ್ರೀ ಕ್ಷಮೆ ಯಾಚಿಸಬೇಕೆಂದು ಲಾಯರ್ ನೋಟಿಸು ಕಳುಹಿಸಿದ್ದಾರೆಂದು ಅವರ ವಕೀಲರು ಹೇಳಿದ್ದರು. ಆದರೆ ನಟಿ ತನುಶ್ರೀ ದತ್ತ ವಕೀಲ ನೋಟಿಸು ತನಗೆ ಬಂದಿಲ್ಲ ಎಂದಿದ್ದಾರೆ.

ಯಾವುದೇ ರೀತಿಯ ನೋಟಿಸು ಬಂದಿಲ್ಲ. ತನ್ನಂತೆ ಅನುಭವವಾದವರು ಆರೋಪ ಹೊರಿಸದಿರಲಿ ಎಂದು ಹೆದರಿಸಲು ಇಂಥ ಬೆದರಿಕಯೊಡ್ಡಲಾಗುತ್ತಿದೆ ಎಂದು ತನುಶ್ರೀ ಆರೋಪಿಸಿದ್ದಾರೆ.

ಯಾರಿಗಾದರೂ ಕೆಟ್ಟ ಅನುಭವಗಳಾಗಿದ್ದರೆ ಇಂತಹ ಬೆದರಿಕೆಗೆ ಹೆದರಬೇಡಿ, ನಿಮ್ಮನ್ನು ಇಡೀ ದೇಶವೇ ಬೆಂಬಲಿಸಲಿದೆ ಎಂದು ದತ್ತ ಅಭಿಪ್ರಾಯ ವ್ಯಕ್ತಪಡಿಸಿದರು.
ಹತ್ತುವರ್ಷಗಳ ಹಿಂದೆ ಒಂದು ಹಾಡಿನ ಚಿತ್ರೀಕರಣದ ವೇಳೆ ನಾನಾ ಪಾಟೇಕರ್ ಲೈಂಗಿಕವಾಗಿ ಅಪಮಾನಿಸಿದರು ಎಂದು ಬಾಲಿವುಡ್ ನಟಿ ತನುಶ್ರೀ ದತ್ತ ಆರೋಪಿಸಿದ್ದಾರೆ. ಆದರೆ ನಾನಾಪಾಟೇಕರ್ ಆರೋಪವನ್ನುತಳ್ಳಿಹಾಕಿದ್ದರು.

Leave a Reply