ನವದೆಹಲಿ : ನಿಮ್ಮ ದಶಕಗಳ ಕಠಿಣ ಪರಿಶ್ರಮದ ಫಲವಾಗಿ ಬಿಜೆಪಿ ಇಷ್ಟು ದೊಡ್ಡ ಪಕ್ಷವಾಗಿ ಬೆಳೆದಿದೆ ಎಂದು ನರೇಂದ್ರ ಮೋದಿಯವರು ಲಾಲ್ ಕೃಷ್ಣ ಅಡ್ವಾಣಿಯವರ ಜನ್ಮದಿನಕ್ಕೆ ಶುಭಾಶಯ ಕೋರಿದ್ದಾರೆ. ಶುಕ್ರವಾರ ಬಿಜೆಪಿ ಉಪಾಧ್ಯಕ್ಷ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಅಡ್ವಾಣಿಯವರ 97ನೇ ಜನ್ಮ ದಿನದ ಶುಭಾಶಯ ಕೋರಲು ಅಡ್ವಾಣಿಯವರ ಮನೆಗೆ ಭೇಟಿ ಕೊಟ್ಟಿದ್ದಾರೆ.

ಇದಕ್ಕೂ ಮೊದಲು ಟ್ವೀಟ್ ಮಾಡಿದ ನರೇಂದ್ರ ಮೋದಿ, ಅಡ್ವಾಣಿಯಂತಹ ನಾಯಕರು ಸಿದ್ಧಪಡಿಸಿದ ನಿಷ್ಠಾವಂತ ನಿಸ್ವಾರ್ಥ ಕಾರ್ಯಕರ್ತರ ಹಲವು ವರ್ಷಗಳ ಪರಿಶ್ರಮದಿಂದಾಗಿ ಬಿಜೆಪಿ ಭಾರತದ ಪ್ರಧಾನ ಪಕ್ಷವಾಗಿ ಬೆಳೆಯಿತು ಎಂದು ಹೇಳಿದರು.

LEAVE A REPLY

Please enter your comment!
Please enter your name here