Wikimedia Commons

ಬೇಕಾಗುವ ಸಾಮಗ್ರಿಗಳು:

ಮೊಟ್ಟೆ (ಬೇಯಿಸಿದ) – 4
ಮಟನ್ ಖೀಮಾ – 1/4 ಕೆ.ಜಿ.
ಹಸಿ ಶುಂಠಿ, ಬೆಳ್ಳುಳ್ಳಿ – 2-3
ಅರಶಿನ – 1 ಚಿಟಕಿ
ರುಚಿಗೆ ತಕ್ಕಷ್ಟು ಉಪ್ಪು
ಕರಿಯಲು ಎಣ್ಣೆ, ಕೊತ್ತಂಬರಿ ಸೊಪ್ಪು ಎಲೆಗಳು

ಮಾಡುವ ವಿಧಾನ:

1. ಖೀಮಾ, ಹಸಿ ಶುಂಠಿ, ಬೆಳ್ಳುಳ್ಳಿ, ಕೆಂಪು ಮೆಣಸಿನ ಕಾಯಿ, ಅರಿಶಿನ ಪುಡಿ, ಉಪ್ಪು ಈ ಎಲ್ಲವನ್ನು ಮಿಕ್ಸಿ ಜಾರಿಗೆ ಹಾಕಿ
ಮೃದುವಾಗಿ ರುಬ್ಬಿಕೊಳ್ಳಿ.

2. ರುಬ್ಬಿದ ಮಿಶ್ರಣವನ್ನು ಬೇಯಿಸಿದ ಮೊಟ್ಟೆಗಳ ಮೇಲೆ ಮೊಟ್ಟೆಗಳು ಕಾಣಿಸದಂತೆ ಪೂರ್ತಿಯಾಗಿ 4 ಮೊಟ್ಟೆಗಳನ್ನು ಕವರ್
ಮಾಡಿ.

3. ಕವರ್ ಮಾಡಿರುವ ಮೊಟ್ಟೆಗಳನ್ನು ಎಣ್ಣೆಯಲ್ಲಿ ಕೆಂಪು ಬಣ್ಣ ಬರುವ ವರೆಗೆ ಡೀಪ್ ಫ್ರೈ ಮಾಡಿ.

4. ಡೀಪ್ ಫ್ರೈ ಮಾಡಿದ ನರ್ಗೀಸಿ ಕುಫ್ತಗಳನ್ನು ಎಣ್ಣೆ ಯಿಂದ ಹೊರಗೆ ತೆಗೆದು ಮಧ್ಯದಲ್ಲಿ ಸಮಾನವಾಗಿ ಕಟ್
ಮಾಡಿ.

5. ಕಟ್ ಮಾಡಿದ ನರ್ಗೀಸಿ ಕುಫ್ತಗಳ ಮೇಲೆ ಕೊತ್ತಂಬರಿ ಸೊಪ್ಪಿನ ಎಲೆಗಳಿಂದ ಅಲಂಕರಿಸಿ. ನರ್ಗೀಸಿ ಕುಫ್ತ ಸವಿಯಲು ಸಿದ್ಧ.

Leave a Reply