ಹೊಸದಿಲ್ಲಿ: ಇಡಿಯನ್ ಮೆಡಿಕಲ್ ಅಸೋಸಿಯೇಶನ್(ಐಎಂಎ) ವೈದ್ಯರ ಕುರಿತಾದ ಒಂದು ಅಧ್ಯಯನ ನಡೆಸಿದ್ದು, ಸಾಮಾನ್ಯ ಜನರಿಗಿಂತ 10-12 ವರ್ಷ ಕಡಿಮೆ ಆಯುಷ್ಯ ವೈದ್ಯರಿಗಿರುವುದು ಎಂಬ ಅಚ್ಚರಿಯ ವಿಚಾರ ಬಹಿರಂಗಗೊಂಡಿದೆ. ವೈದ್ಯರು ಒತ್ತಡದಿಂದ ಬಳಲುವುದು ಆಯಸ್ಸು ಕಡಿಮೆಯಾಗಲು ಕಾರಣ ಎನ್ನಲಾಗಿದ್ದು, ವೈದ್ಯರಲ್ಲಿಯೂ ಆತ್ಮಹ್ಯೆಯ ಘಟನೆಗಳು ನಡೆಯುತ್ತಿವೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.
ಐಎಂಎ ಚಿಕಿತ್ಸಕರ ಆತ್ಮಹ್ಯೆಯನ್ನು ಸಾರ್ವಜನಿಕ ಸ್ವಾಸ್ಥ್ಯ ಸಂಕಟ ಎಂದು ಘೋಷಿಸಿದೆ. ಐಎಂಎಯ ಮಾಜಿ ಅಧ್ಯಕ್ಷ ಡಾ. ಕೆ.ಕೆ.ಅಗ್ರವಾಲರ ಪ್ರಕಾರ 2018 ರಲ್ಲಿಸುಮಾರು ಆರು ವೈದ್ಯರು ಒಂದೇ ಸಮಯದಲ್ಲಿ ಏಮ್ಸ್‍ನ ಮನೋಚಿಕಿತ್ಸೆಯ ವಾರ್ಡಿನಲ್ಲಿ ಭರ್ತಿಯಾಗಿದ್ದಾರೆ.ಅವರೆಲ್ಲರೂ ಒತ್ತಡ ಅನುಭವಿಸುತ್ತಿದ್ದರು ಎಂದು ಅವರು ಹೇಳಿದರು.
ಈ ಕಾರಣಗಳಿಂದ ವೈದ್ಯರಲ್ಲಿ ಒತ್ತಡ ಹೆಚ್ಚಳವಾಗುತ್ತಿದೆ:
* ಹೆಚ್ಚಿನವೈದ್ಯರು 12 ಗಂಟೆ ಶಿಫ್ಟ್‍ನಲ್ಲಿ ಕರ್ತವ್ಯ ಮಾಡುತ್ತಾರೆ.
*ಇದರಲ್ಲಿ ಶಿಕ್ಷಣ, ಪರಾಮರ್ಶೆ, ರೋಗಿಗಳ ಸಂದರ್ಶನ, ಶಂಶೋಧನೆ ಸೇರಿದೆ.
*ಮೂಲಭೂತ ಸವಲತ್ತುಗಳ ಕೊರತೆಯಿಂದಾಗಿ ಬಹಳ ಹೆಚ್ಚುರೋಗಿಗಳನ್ನು ನೋಡುವುದು
*ಒಂಟಿತನ, ರೋಗ,ಡಿಫ್ರೆಶನ್ ಇತ್ಯಾದಿ ಕಾರಣಗಳು
ವಿದ್ಯಾರ್ಥಿ ಜೀವನದಿಂದಲೇ ಒತ್ತಡ ಆರಂಭ:
ಸುಮಾರು 15ರಿಂದ 30 ಶೇಕಡ ವಿದ್ಯಾರ್ಥಿಗಳು ಮತ್ತು ಮೆಡಿಕಲ್ ರೆಸಿಡೆಂಟ್ಸ್ ಗಳಿಗೆ ಡಿಫ್ರೆಶನ್ ಒಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಒತ್ತಡ ಮಟ್ಟ ಹಾಗಿರುತ್ತದೆ. ಆತ್ಮಹತ್ಯೆ ಮಾಡಿಕೊಳ್ಳಲೇ ಎನಿಸುವಷ್ಟು. ಇದನ್ನು ಮೀರಿ ನಿಲ್ಲಲು ಹಲವು ವಿದ್ಯಾರ್ಥಿಗಳು ವೈದ್ಯರು ಪೈನ್ ಕಿಲ್ಲರ್ ಸೇವಿಸುತ್ತಾರೆ. ಆದ್ದರಿಂದ ಉನ್ನತ ವೈದ್ಯರು ಕೂಡ ಒತ್ತಡದಿಂದಲೆ ಕೆಲಸ ಮಾಡಬೇಕಾಗುತ್ತದೆ.
ಬರ್ನ್ ಔಟ್‍ಗೆ ಮಹಿಳಾ ಚಿಕಿತ್ಸಕರು:
ಒತ್ತಡ ಸಮಸ್ಯೆ ಮಹಿಳಾ ವೈದ್ಯರಲ್ಲಿ ಹೆಚ್ಚಿರುತ್ತದೆ. ಕೆಲಸದ ಸ್ಥಳ ಮತ್ತು ಮನೆ ಎರಡು ಕಡೆ ಒತ್ತಡ ಸ್ಥಿತಿ ಇದಕ್ಕೆ ಕಾರಣವಾಗದೆ.ಬರ್ನ್ ಔಟ್ ವಿಷಯದಲ್ಲಿ ಹೆಚ್ಚು ಶ್ರಮ ಹಾಕಿ ಕೆಲಸ ಮಾಡುವುದು ಕಾರಣವಾಗಿದೆ. ಮಹಿಳಾ ತಜ್ಞರ ಸಂಖ್ಯೆ ಕಡಿಮೆ ಇರುವುದು ಹೆಚ್ಚು ಗಂಟೆ ಅವರು ಕೆಲಸ ಮಾಡಬೇಕಾದ ಪರಿಸ್ಥಿತಿಯನ್ನು ಹುಟ್ಟು ಹಾಕಿದೆ. ಡಾ. ಅಗ್ರವಾಲ್ ಹೇಳುವ ಪ್ರಕಾರ ಈಸಮಸ್ಯೆಯನ್ನು ರೋಗಿ ಮತ್ತು ವೈದ್ಯರ ಅನುಪಾತದತ್ತ ಗಮನಹರಿಸುವುದು ಮುಖ್ಯವಾಗಿದೆ.