ಎನ್.ಸಿ.ಪಿ ನಾಯಕ ತಾರೀಕ್ ಅನ್ವರ್ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಇಂದು ಬೆಳಿಗ್ಗೆ ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಹಿತ ಕೆಲ ನಾಯಕರನ್ನು ಅವರು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಎನ್.ಸಿ.ಪಿಯಲ್ಲಿದ್ದ ಅವರ ಬೆಂಬಲಿಗರೂ ಅವರ ಜೊತೆಯಲ್ಲಿದ್ದರು.
ಎನ್.ಸಿ.ಪಿ ತೊರೆಯುವುದರೊಂದಿಗೆ ಬಿಹಾರದ ಕತಿಹಾರ್ ಲೋಕಸಭಾ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಎನ್ ಸಿಪಿ ಸ್ಥಾಪಕ ನಾಯಕನಾಗಿರುವ ತಾರೀಕ್ ಅನ್ವರ್ ಕಳೆದ ತಿಂಗಳು ಅವರು ಎನ್.ಸಿ.ಪಿ ತೊರೆದಿರುವುದನ್ನು ಇಲ್ಲಿ ಸ್ಮರಿಸಬಹುದು. 1980 ರ ದಶಕದಲ್ಲಿ ಅವರು ಬಿಹಾರ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು, 1990ರಲ್ಲಿ ಶರದ್ ಪವಾರ್ ಜೊತೆ ಅವರೂ ಕಾಂಗ್ರೆಸ್ ತೊರೆದಿದ್ದರು.