ಹೈವೇ ರಸ್ತೆಯಲ್ಲಿ ಪ್ರಾಣಿಗಳು ವಾಹನಗಳ ಅಡಿಗೆ ಬಿದ್ದು ಸಾಯುತ್ತವೆ. ದಟ್ಟ ಕಾಡುಗಳ ನಡುವೆ ಇರುವ ಹೈವೇ ರಸ್ತೆಗಳನ್ನು ಪ್ರಾಣಿಗಳು ತಮ್ಮ ಮರಿಗಳ ಕೆಲವೊಮ್ಮೆ ದಾಟುವಾಗ ಅಪಘಾತಕ್ಕೀಡಾಗುತ್ತವೆ. ಹೀಗೆ ರಸ್ತೆ ಅಪಘಾತಗಳಲ್ಲಿ ಪ್ರಾಣಿಗಳು ಸಾಯದಂತೆ ತಡೆಗಟ್ಟಲು ಎನ್ಸಿಆರ್ ವಿಶೇಷ ಪ್ರಾಣಿ ಸೇತುವೆಯನ್ನು ನಿರ್ಮಿಸಲಿದೆ. ಇದು ಪ್ರಾಣಿಗಳಿಗೆ ನಿಭಿಡ ಹೆದ್ದಾರಿಯನ್ನು ಸುರಕ್ಷಿತವಾಗಿ ದಾಟಲು ಸಹಾಯ ಮಾಡುತ್ತದೆ.
ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ ಈ ಪ್ರೊಪೋಸಲ್ ಮುಂದಿಟ್ಟಿದ್ದು, ಇದರ ಮೂಲಕ ಪ್ರಾಣಿಗಳು ಯಾವುದೇ ಮನುಷ್ಯ ಆಪಾಯವಿಲ್ಲದಂತೆ ದಾಟಬಹುದು ಎಂದು ಹೇಳಿದೆ.  ಹರಿಯಾಲಿ ಎಂಬ ಎನ್ಜಿಒ ಸಂಸ್ಥಾಪಕ ವಿವೇಕ್ ಕಂಬೊಜ್ ಮಾತನಾಡುತ್ತಾ, ನೇಪಾಳದಂತಹ ದೇಶಗಳಲ್ಲಿ ಕೂಡ ಪ್ರಾಣಿಗಳಿಗೆ ಅಂಡರ್ಪಾಸ್ಗಳಿವೆ. ಆದ್ದರಿಂದ ನಮ್ಮ ದೇಶದಲ್ಲೂ ಪ್ರಾಣಿಗಳಿಗಾಗಿ ಸೇತುವೆ ಬಹಳ ಅವಶ್ಯಕ ಎಂದು ಹೇಳಿದರು.

Leave a Reply