ಲೋಕಸಭಾ ಚುನಾವಣೆ ಫಲಿತಾಂಶಗಳನ್ನು ಗುರುವಾರ ಪ್ರಕಟಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿ ಪಕ್ಷವು ಅಬ್ಬರದ ಗೆಲುವು ಸಾಧಿಸಿದೆ. ಗೆದ್ದವರು ಹರ್ಷೋಲ್ಲಾಸದಲ್ಲಿದ್ದರೆ ಸೋತವರು ನಿರಾಸೆ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೊಂದು ವೈರಲ್ ಆಗಿದ್ದು, ಜಲಂಧರ್ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾದ ನೀತು ಶಟರ್ಟನ್ ವಾಲಾರವರ ಕುಟುಂಬದಲ್ಲಿ 9 ಮಂದಿ ಸದಸ್ಯರಿದ್ದರೂ ಅವರು ಪಡೆದ ಮತ ಕೇವಲ 5. ಇದಕ್ಕಾಗಿ ಅವರು ಮಾಧ್ಯಮದ ಮುಂದೆ ಕಣ್ಣೀರಿಟ್ಟಿದ್ದರು. ಐವಿಯಮ್ ದೋಷ ಅಥವಾ ತನ್ನ ಕುಟುಂಬದ ಸದಸ್ಯರು ಮತ ಚಲಾಯಿಸದೆ ಮೋಸಗೊಳಿಸಿದರು ಎಂದು ಅವರು ದುಃಖ ವ್ಯಕ್ತ ಪಡಿಸಿದ್ದರು. ಆದರೆ ನಿಜವಾಗಿ ಎಣಿಕೆ ಪೂರ್ಣ ಗೊಳ್ಳುವುದಕ್ಕಿಂತ ಮುಂಚೆಯೇ ನೀತೂ ಭಾವುಕರಾಗಿದ್ದರು. ಅಂತಿಮ ಎಣಿಕೆ ಮುಗಿಯುವಾಗ ಅವರಿಗೆ ಒಟ್ಟು 856 ಸಿಕ್ಕಿತ್ತು.

ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ ಪ್ರಕಾರ (ಇಸಿಐ), ಅವರು 856 ಮತಗಳೊಂದಿಗೆ ಅಭ್ಯರ್ಥಿಗಳ ಪಟ್ಟಿಯಲ್ಲಿ 19 ನೇ ಸ್ಥಾನ ಪಡೆದಿದ್ದಾರೆ.

Leave a Reply