ನವದೆಹಲಿ: ಮೊಟ್ಟಮೊದಲ ಬಾರಿಗೆ ಭಾರತದ ಪೂರ್ಣ ಆತಿಥ್ಯದಲ್ಲಿ ನಡೆಯಲಿರುವ 2023 ಕ್ರಿಕೆಟ್ ವಿಶ್ವಕಪ್‌ನಲ್ಲಿ 10 ತಂಡಗಳು ಭಾಗವಹಿಸಲಿವೆ ಎಂದು ಐಸಿಸಿ ತಿಳಿಸಿದೆ.

ಸಿಂಗಾಪುರದಲ್ಲಿ ನಡೆದ ಐಸಿಸಿಯು ಸಿಇಒಗಳ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು, ಅದರೊಂದಿಗೆ 2023ರ ವಿಶ್ವಕಪ್‌ನಲ್ಲಿ ಹೆಚ್ಚಿನ ತಂಡಗಳಿಗೆ ಅವಕಾಶ ನೀಡುವ ಪ್ರಸ್ತಾಪವನ್ನು ಐಸಿಸಿ ಪುರಸ್ಕರಿಸಿಲ್ಲ.

ಅದರೆ ವಿಶ್ವಕಪ್‌ಗೆ ಅರ್ಹತೆ ಪಡೆಯುವ ವಿಧಾನದಲ್ಲಿ ಮಾತ್ರ ದೊಡ್ಡ ಮಟ್ಟದ ಬದಲಾವಣೆ ಮಾಡಲಾಗಿದ್ದು, ಮೂರು ಹಂತಗಳಲ್ಲಿ ಟೂರ್ನಿಯ ಬಳಿಕ ವಿಶ್ವಕಪ್‌ನ ಪ್ರಧಾನ ಹಂತಕ್ಕೆ ಅರ್ಹತೆ ಸಿಗಲಿದೆ ಇದರಲ್ಲಿ ಸುಮಾರು 32 ತಂಡಗಳು ಭಾಗವಹಿಸಲಿದ್ದು 2019ರ ಜುಲೈನಿಂದ 2022ರ ವರೆಗೆ ಒಟ್ಟು 372 ಪಂದ್ಯಗಳು ನಡೆಯಲಿದೆ.

13 ತಂಡಗಳು ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್‌ನಲ್ಲಿ ಅಗ್ರ 8 ತಂಡಗಳು ವಿಶ್ವಕಪ್‌ಗೆ ನೇರ – ಅರ್ಹತೆ ಪಡೆಯಲಿದ್ದು ಉಳಿದ ಐದು ತಂಡಗಳೂ ಕ್ರಿಕೆಟ್ ವಿಶ್ವಕಪ್ ಕ್ವಾಲಿಫೈಯರ್ ನಲ್ಲಿ ಆಡಲಿವೆ. 2019ರ ವಿಶ್ವಕಪ್‌ನಂತೆ 2023ರ ವಿಶ್ವಕಪ್ ನ ಪ್ರಧಾನ ಹಂತದಲ್ಲಿ ಅಗ್ರ 10 ತಂಡಗಳು ಮಾತ್ರವೇ ಆಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply