ಹಿಂದಿ ಸೀರಿಯಲ್ ಕುಂಡಲಿ ಭಾಗ್ಯ ಖ್ಯಾತಿಯ ಹೆಸರಾಂತ ನಟಿ ಅಂಜುಮ್ ಫಕೀಹ್ ತಮ್ಮ ಆರಂಭಿಕ ಕಾಲದ ಹೋರಾಟವನ್ನು ತೆರೆದಿಟ್ಟಿದ್ದಾರೆ. ನಟಿಯಾಗ ಬೇಕೆಂಬ ಕನಸನ್ನು ಈಡೇರಿಸಲು ಆಕೆ ಬಹಿಷ್ಕಾರವನ್ನು ಎದುರಿಸಬೇಕಾಗಿ ಬಂತು ಎಂದು ಬಹಿರಂಗಪಡಿಸಿದ್ದಾರೆ. ರತ್ನಾಗಿರಿಯ ಸಾಂಪ್ರದಾಯಿಕ ಮುಸ್ಲಿಂ ಕುಟುಂಬ ಅಂಜುಮ್ ರದ್ದು. ಮಾಡೆಲಿಂಗ್ ಗಾಗಿ ಬಿಕಿನಿ ಶೂಟ್ ಕುಟುಂಬದಿಂದ ಬಹಿಷ್ಕಾರ ಎದುರಿಸಬೇಕಾಯಿತು.

ಟೈಮ್ಸ್ ಆಫ್ ಇಂಡಿಯಾದೊಂದಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅಂಜುಮ್, “ನನ್ನ ಕುಟುಂಬ ಕಟ್ಟು ನಿಟ್ಟಿನ ಸಂಪ್ರದಾಯವಾದಿಯಾಗಿದ್ದು, ಟಿವಿ ನೋಡುವುದು ಕೂಡ ನಮ್ಮ ಮನೆಯಲ್ಲಿ ನಿಷೇಧವಾಗಿತ್ತು. ಕೊನೆಗೆ ನಾನು 9 ನೇ ತರಗತಿಯಲ್ಲಿದ್ದಾಗ ನನ್ನ ತಂದೆಯ ಮನವೊಲಿಸಿದ ಬಳಿಕ ಮನೆಗೆ ಟಿವಿ ಬಂತು.ಆದರೆ ನಾವು ಮನೆಯಲ್ಲಿ ಟಿವಿ ಹೊಂದಿದ್ದೇವೆ ಎಂಬ ಕಾರಣಕ್ಕಾಗಿ ನಮ್ಮ ಅಜ್ಜ ಎರಡು ವರ್ಷಗಳಿಂದ ನಮ್ಮ ಮನೆಗೆ ಬರಲಿಲ್ಲ. 2009 ರಲ್ಲಿ, ನಾನು ಕಲಿಕೆಯನ್ನು ನಿಲ್ಲಿಸಿ ಮಾಡೆಲಿಂಗ್ ಹೋಗುವ ನಿರ್ಧಾರದ ಬಗ್ಗೆ ಹೇಳಿದಾಗ ಮನೆಯಲ್ಲಿ ತುಂಬಾ ಅಸಮಾಧಾನಗೊಂಡರು. ನನ್ನ ಮನೆಯಲ್ಲಿ ಭೂಕಂಪ ಆದಂತಿತ್ತು ಅಂದಿನ ಪರಿಸ್ಥಿತಿ. ನಾನು ಮನೆ ಬಿಟ್ಟು ಹೋಗಬೇಕಾಗುತ್ತದೆ ಎಂದು ಹೇಳಿದರು. ಬುರ್ಖಾ ಎಸೆದು ಬ್ಯಾಗ್ ಪ್ಯಾಕ್ ಮಾಡಿ ಮನೆಯಿಂದ ಹೊರ ನಡೆದು ಬಿಟ್ಟೆ.

View this post on Instagram

#justfie #batman #levis #anjumfakih

A post shared by Anjum Fakih (@nzoomfakih) on

ನಾನು ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದೆ, ಸುಗಂಧ ದ್ರವ್ಯಗಳನ್ನು ಮಾರಾಟ ಮಾಡಿದೆ. ಆ ದಿನಗಳಲ್ಲಿ ನಾನು ಬಾಂದ್ರಾದಿಂದ ಅಂಧೇರಿಗೆ ಆಡಿಷನ್ ನೀಡಲು ಹೋಗುತ್ತಿದ್ದೆ. ನನ್ನ ಬಳಿ ಹಣವಿರಲಿಲ್ಲ, ಆದರೆ ನನ್ನ ಪೋಷಕರನ್ನು ಎಂದೂ ಕೇಳಲಿಲ್ಲ. ಕಾರ್ಟರ್ ರಸ್ತೆಯಲ್ಲಿ ಅಂಕಲ್ ನನಗೆ ಪ್ರತಿದಿನ ಸಸ್ಯಾಹಾರಿ ಪುಲಾವೊವನ್ನು ಉಚಿತವಾಗಿ ನೀಡುತ್ತಿದ್ದರು. ನಿಧಾನವಾಗಿ, ನನ್ನ ಹೆತ್ತವರು ನನ್ನ ಪ್ರೊಫೆಶನನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದರು. ಈಗ ನನ್ನನ್ನು ಪರದೆಯ ಮೇಲೆ ನೋಡಿ ಸಂತೋಷಪಡುತ್ತಾರೆ.ಈಗ ಎಲ್ಲವೂ ಚೆನ್ನಾಗಿದೆ, ಈಗ ನನ್ನ ತಾಯಿ ನನ್ನೊಂದಿಗೆ ಇರುತ್ತಾರೆ ಎಂದು ಅಂಜುಮ್ ಹೇಳಿದರು.

LEAVE A REPLY

Please enter your comment!
Please enter your name here