ಖ್ಯಾತ ಗಾಯಕಿ ಲತಾಮಂಗೇಶ್ಕರ್ ಅವರ ಎಕ್ ಪ್ಯಾರ್ ಕ ನಗ್ಮ ಹೈ ಎಂಬ ಫೇಮಸ್ ಹಾಡನ್ನು ಹಾಡುವ ಮೂಲಕ ರಾಣು ಮೊಂಡಲ್ ಖ್ಯಾತಿಯ ಉತ್ತುಂಗಕ್ಕೇರಿದ್ದು ನಮಗೆಲ್ಲರಿಗೂ ಗೊತ್ತು. ಇದೀಗ ಎರಡು ವರ್ಷದ ಪುಟ್ಟ ಹುಡುಗಿ ಮಂಗೇಶ್ಕರ್ ಅವರ ಇಲ್ಲ ಲಗ್ ಜಾ ಗಲೇ ಎಂಬ ಫೇಮಸ್ ಹಾಡನ್ನು ಹಾಡಿದ್ದು ಟ್ವಿಟ್ಟರ್ ನಲ್ಲಿ ಭಾರಿ ವೈರಲ್ ಆಗಿದೆ.

ಎರಡು ವರ್ಷ ವಯಸ್ಸಿನ ಪ್ರಜ್ಞಾ ಮೇಧಾ ಅವರ ವಿಡಿಯೋ ವೈರಲ್ ಆಗಿದ್ದು, ಮಾತ್ರವಲ್ಲ ಪುಟ್ಟ ಹುಡುಗಿ ಯಾವ ರೀತಿ ಸಂವೇದನಾ ಶೀಲವಾಗಿ ಹಾಡುತ್ತಿದ್ದಾಳೆ ಎಂಬುದನ್ನು ನೋಡಬಹುದು. ಆ ಪುಟ್ಟ ಹುಡುಗಿ ತುಂಬಾ ಕೌಶಲ್ಯದಿಂದ ಹಾಡುತ್ತಿರುವುದು ನಿಜಕ್ಕೂ ಆಶ್ಚರ್ಯಕರ. ಈ ಹಾಡು 1964 ರ ಚಲನಚಿತ್ರ ವೊಹ್ ಕೌ ಥಿ ಎಂಬ ಚಿತ್ರದ ಹಾಡು. ಇದು ಬಾಲಿವುಡ್ ಅತ್ಯಂತ ಪ್ರಸಿದ್ಧ ಹಾಡುಗಳಲ್ಲಿ ಒಂದಾಗಿದೆ.

ವಿಡಿಯೋ ನೋಡಿ

LEAVE A REPLY

Please enter your comment!
Please enter your name here