ಚೆನ್ನೈ: ದೇಶದಲ್ಲಿ ಒಂದೆಡೆ ಪೌರತ್ವ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದ್ದರೆ, ಮತ್ತೊಂಡೆಗೆ ದೇಶದಲ್ಲಿ ಬಡತನದ ಭೀಕರ ಚಿತ್ರಣಗಳು ನಮ್ಮ ಮುಂದೆ ಬರುತ್ತಿದೆ. ತಮಿಳುನಾಡಿನಲ್ಲಿ ತಾಯಿಯೊಬ್ಬಳು ಮಕ್ಕಳ ಹಸಿವು ತಣಿಸಲಿಕ್ಕಾಗಿ ತನ್ನ ತಲೆ ಬೋಳಿಸಿರುವುದು ಬೆಳಕಿಗೆ ಬಂದಿದೆ. ಸೇಲಂನ ಪ್ರೇಮಾ (31) ಎಂಬ ಮಹಾ ತಾಯಿ 150 ರೂ.ಗೆ ತನ್ನ ತಲೆಕೂದಲನ್ನು ಮಾರಿಕೊಂಡವರು. ಈಕೆಯ ಪತಿ ಈ ಹಿಂದೆ ಸಾಲಗಾರರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರ ಬಳಿಕ ಪ್ರೇಮಾರಿಗೆ ಮಕ್ಕಳನ್ನು ಸಾಕುವುದು ಕಷ್ಟಕರವಾಗಿತ್ತು.

ಕೂದಲು ಮಾರಿದರೆ ಹಣ ಸಿಗುತ್ತದೆ ಎಂದು ಯಾರೋ ಹೇಳಿದ ಕಾರಣ ಪ್ರೇಮಾ ತನ್ನ ಕೂದಲನ್ನು ಮಾರಿದ್ದಾರೆ. ಬಳಿಕ ತನ್ನ ಮಕ್ಕಳಿಗೆ ಹೊಟ್ಟೆ ತುಂಬಾ ಆಹಾರ ನೀಡಿ ಬಳಿಕ ಉಳಿದ ಹಣದಿಂದ ಕೀಟನಾಶಕ ಖರೀದಿಸಿ ಆತ್ಮಹತ್ಯೆ ಮಾಡಲು ಪ್ರಯತ್ನಿಸಿದ್ದು, ಬಳಿಕ ಆಕೆಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಜಿ ಬಾಲಾ ಎಂಬವರು ಪ್ರೇಮಾ ಅವರ ಕಥೆಯನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇದೀಗ ಕೆಲವರು ಈ ಅಮ್ಮನಿಗೆ ಧನ ಸಹಾಯ ಮಾಡುವುದಾಗಿ ಮುಂದೆ ಬಂದಿದ್ದಾರೆ. ಜೊತೆಗೆ ಜಿಲ್ಲಾಡಳಿತ ಆಕೆಗೆ ಮಾಸಿಕ ವಿಧವೆಯ ಪಿಂಚಣಿಯನ್ನು ಮಂಜೂರು ಮಾಡುವುದಾಗಿ ಹೇಳಿದೆ.

LEAVE A REPLY

Please enter your comment!
Please enter your name here