ಗಾಂಧಿ ನಗರ: ಇದು ಕಲಿಯುಗ. ಇಲ್ಲಿ ಏನು ಬೇಕಾದರೂ ಸಂಭವಿಸಬಹುದು. ಪ್ರೇಮಿಗಳಿಬ್ಬರು ಮದುವೆ ತಯಾರಿ ನಡೆಸುತ್ತಿದ್ದ ಮಧ್ಯೆಯೇ ವಧುವಿನ ತಾಯಿ ಮತ್ತು ವರನ ತಂದೆ ಪರಾರಿಯಾಗಿರುವ ಘಟನೆ ಗುಜರಾತ್ ನ ಸೂರತ್ ನಿಂದ ವರದಿಯಾಗಿದೆ. ಹುಡುಗಿಯ ತಾಯಿ ಮತ್ತು ಹುಡುಗನ ತಂದೆಗೆ ಪರಸ್ಪರ ಪ್ರೇಮಾಂಕುರವಾಗಿ ಇಬ್ಬರೂ ಜನವರಿ 10ನೇ ತಾರೀಕಿನಿಂದ ಇಬ್ಬರೂ ನಾಪತ್ತೆಯಾಗಿದ್ದಾರೆ. ಹೀಗಾಗಿ ಎರಡು ಕುಟುಂಬದವರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದಾರೆ.

ವರನ ತಂದೆಗೆ 48 ವರ್ಷ, ವಧುವಿನ ತಾಯಿಗೆ 46 ವರ್ಷ ಎಂದು ತಿಳಿದು ಬಂದಿದೆ. ಇವರ ಮಕ್ಕಳ ಮದುವೆ ಫೆಬ್ರವರಿ ತಿಂಗಳಲ್ಲಿ ನಿಗದಿಯಾಗಿತ್ತು. ಮಕ್ಕಳು ಹೆತ್ತವರನ್ನು ಪರಸ್ಪರ ಒಪ್ಪಿಸಿ ಮದುವೆಗೆ ತೀರ್ಮಾನ ತೆಗೆದಿದ್ದರು. ಮಕ್ಕಳ ಹೆತ್ತವರು ಯುವಕರಾಗಿದ್ದಾಗ ಪರಸ್ಪರ ಪ್ರೀತಿಸುತ್ತಿದ್ದರು, ಈಗ ಮಕ್ಕಳ ವಿವಾಹದ ತಯಾರಿಯಲ್ಲಿ ಪರಸ್ಪರ ಭೇಟಿಯಾಗಿ ಮತ್ತೆ ಪ್ರೀತಿ ಮಾಡಲು ಶುರು ಮಾಡಿದರು ಎಂದು ಶಂಕಿಸಲಾಗಿದೆ. ಸದ್ಯಕ್ಕೆ ಪೊಲೀಸರು ದೂರು ದಾಖಲಿಸಿ ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here