ಮಧ್ಯಪ್ರದೇಶದ ಎಂಬಿಎ ವಿದ್ಯಾರ್ಥಿನಿಯೋರ್ವಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿದೆ. ಟ್ರಾಫಿಕ್ ಜಾಗೃತಿ ಮೂಡಿಸಲು ಈ ವಿದ್ಯಾರ್ಥಿನಿ ವಿಶೇಷ ವಿನೂತನ ಮಾರ್ಗವನ್ನು ಕಂಡು ಕೊಂಡಿದ್ದಾಳೆ. ಇಂದೋರ್ (ಮಧ್ಯಪ್ರದೇಶ) ದಲ್ಲಿ ವಾಹನ ಸವಾರರಿಗೆ ಟ್ರಾಫಿಕ್ ನಿಯಮಗಳ ಬಗ್ಗೆ ಅರಿವು ಮೂಡಿಸುತ್ತಿರುವ ಎಂಬಿಎ ವಿದ್ಯಾರ್ಥಿ ಶುಭಿ ಜೈನ್ ಡ್ಯಾನ್ಸ್ ಮಾಡುತ್ತಾ ಎಚ್ಚರಿಕೆ ನೀಡುವುದನ್ನು ವಿಡಿಯೋದಲ್ಲಿ ಕಾಣಬಹುದು. ದ್ವಿಚಕ್ರ ವಾಹನ ಚಾಲಕರಿಗೆ ಹೆಲ್ಮೆಟ್ ಧರಿಸದ ಕಾರಣ ಮತ್ತು ಕಾರು ಚಾಲಕರು ಸೀಟ್ ಬೆಲ್ಟ್ ಧರಿಸದ ಕಾರಣ ಜೈನ್ ಎಚ್ಚರಿಕೆ ನೀಡುತ್ತಾರೆ.

ವಿಡಿಯೋ ನೋಡಿ

Leave a Reply