ಸಾಂದರ್ಭಿಕ ಚಿತ್ರ

ಆ ಬೀದಿ ನಾಯಿಯೊಂದು ಅದೇ ಸ್ಥಳದಲ್ಲಿ ಅಲುಗಾಡದೆ ಎರಡು ದಿನಗಳಿಂದ ಚಡಪಡಿಸುತ್ತಿದೆ ಎಂಬ ಕರೆ ನಮಗೆ ಬಂತು. ನಾಯಿಯು ಗಂಭೀರ ರೋಗಕ್ಕೆ ತುತ್ತಾಗಿರಬಹುದು ಎಂದು ಸ್ಥಳೀಯರು ತಿಳಿಸಿದರು. ನಮಗೂ ಹಾಗೆಯೇ ಅನ್ನಿಸಿದೆ.ಆ ಯುವಕ ನಾಯಿಯನ್ನು ಯಾವುದೇ ಮುಲಾಜಿಲ್ಲದೆ ಸ್ವಂತ ಕೈಯಾರೆ ಎತ್ತಿಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು. ಅದರ ಹಲವಾರು ಹಲ್ಲುಗಳು ತುಂಡಾಗಿದ್ದವು, ಕಾಲಿನ ಎಲುಬುಗಳು ತುಂಡಾಗಿದ್ದವು. ಇದೀಗ ಸರಿಯಾದ ಚಿಕಿತ್ಸೆಯ ಬಳಿಕ ಆ ಬೀದಿ ನಾಯಿಯು ತಿನ್ನಲು ಕುಡಿಯಲು ಸ್ಪಂದಿಸಿದೆ. ಶಸ್ತ್ರ ಚಿಕಿತ್ಸೆ ಮಾಡದಿದ್ದರೆ ಅದು ಬದುಕುತ್ತಿರಲಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಈಗ ನಾಯಿಯನ್ನು ನೋಡಿದರೆ ನಿಮಗೇ ಸಂತೋಷ ಆಗಬಹುದು… ತನಗೆ ಚಿಕಿತ್ಸೆ ಕೊಡಿಸಿದವರಿಗೆ ನಾಯಿ ಆಭಾರಿ ಆಗಿರುವುದನ್ನು ನೀವೇ ನೋಡಬಹುದು.. ಬಹಳ ಮನಮುಟ್ಟುವ ವಿಡಿಯೋ ಇದು… Animal aid ನ ಈ ವಿಡಿಯೋ ನೀವೂ ನೋಡಿ ಶೇರ್ ಮಾಡಿ… ಇಂತಹ ಮೂಕ ಪ್ರಾಣಿಗಳನ್ನು ಕಂಡು ಕಣ್ಣು ಮುಚ್ಚಿ ಸಾಗದಿರಿ… ನಿಮ್ಮ ಸಣ್ಣ ಪ್ರಯತ್ನ ಅದಕ್ಕೆ ಮರುಜೀವನ ನೀಡಬಹುದು ಮತ್ತು ದೇವನ ಬಳಿ ಈ ಕೆಲಸ ಪುಣ್ಯದಾಯಕವೂ ಹೌದು….

Leave a Reply