ಪಾಟ್ನಾ : ನನ್ನ ಗಂಡ ದುರ್ವಾಸನೆ ಬೀರುತ್ತಾನೆ ಎಂದು ಮಹಿಳೆಯೋರ್ವರು ವಿಚ್ಛೇದನ ಅರ್ಜಿ ಸಲ್ಲಿಸಿದ ಘಟನೆ ಬಿಹಾರದಲ್ಲಿ ನಡೆದಿದೆ. ನನ್ನ ಗಂಡ ದುರ್ವಾಸನೆ ಬೀರುತ್ತಾನೆ. ಮೈಯೆಲ್ಲಾ ಅಂಟುತ್ತೆ. ಶೇವಿಂಗ್ ಮಾಡಲ್ಲ, ವಾರಗಟ್ಟಲೆ ಸ್ನಾನ ಮಾಡಲ್ಲ. ಅದಕ್ಕಾಗಿ ನಮ್ಮ ಮಧ್ಯೆ ಸಂಬಂಧ ಚೆನ್ನಾಗಿಲ್ಲ, ನಮಗೆ ಮಕ್ಕಳೂ ಆಗಿಲ್ಲ ಇಂಥ ಸಂಬಂಧ ಅರ್ಥ ಇಲ್ಲ ಎಂದು ಕೋರ್ಟ್ ಎದುರು ಮಹಿಳಾ ಆಯೋಗದ ಮುಂದೆ ಗಂಡನನ್ನು ದೂರಿದ್ದಾರೆ.

ಸೋನಿ ದೇವಿ ಎಂಬುವರು ಮನೀಶ್ ರಾಮ್ ಎಂಬ ಯುವಕನನ್ನು ಎರಡು ವರ್ಷಗಳ ಹಿಂದೆ ವಿವಾಹ ಆಗಿದ್ದರು. ಗಂಡನನ್ನು ತುಂಬಾ ಬಾರಿ ಸುಧಾರಿಸಲು ಪ್ರಯತ್ನಿಸಿದೆ. ಗಂಡ ವೃತ್ತಿಯಲ್ಲಿ ಪ್ಲಂಬರ್ ಆಗಿದ್ದಾರೆ. ಕೋರ್ಟ್ ದಂಪತಿಗಳಿಗೆ ಎರಡು ತಿಂಗಳ ಕಾಲಾವಕಾಶ ನೀಡಿದೆ. ಅದರೊಳಗೆ ಸುಧಾರಿಸಿಕೊಳ್ಳಬೇಕು ಎಂದು ಮಹಿಳಾ ಆಯೋಗ ತಾಕೀತು ಮಾಡಿದೆ.

LEAVE A REPLY

Please enter your comment!
Please enter your name here