ಮಕ್ಕಳಿಗೆ ವಿವಿಧ ಅಭ್ಯಾಸ ಇರುತ್ತದೆ. ಉಗುರು ಕಚ್ಚುವುದು, ಬೆರಳು ಚೀಪುವುದು ಇತ್ಯಾದಿ ಅಭ್ಯಾಸವಿದ್ದರೆ ಹೆತ್ತವರಿಗೆ ಬಿಡಿಸುವುದೇ ಒಂದು ದೊಡ್ಡ ತಲೆಬೇನೆಯಾಗಿರುತ್ತದೆ. ಇಲ್ಲೊಬ್ಬಳು ಹುಡುಗಿಗೆ ಕೂದಲನ್ನು ತಿನ್ನುವ ದುರಭ್ಯಾಸ. ಹಲವು ವರ್ಷಗಳಿಂದ ಕೂದಲನ್ನು ತಿನ್ನುತ್ತಿರುವ ಈ ಹುಡುಗಿಯ ಹೊಟ್ಟೆಯಿಂದ ವೈದ್ಯರು 6.8 ಕೆಜಿ ಹೇರ್ ಬಾಲ್ ಅನ್ನು ಹೊರ ತೆಗೆದಿದ್ದು ವರದಿಯಾಗಿದೆ.

ವರದಿಗಳ ಪ್ರಕಾರ, ಜಾರ್ಖಂಡ್‌ನ ಆಸ್ಪತ್ರೆಯ ವೈದ್ಯರು 17 ವರ್ಷದ ಬಾಲಕಿಯ ಹೊಟ್ಟೆಯಿಂದ 6.8 ಕೆಜಿ ಕೂದಲನ್ನು ಹೊರ ತೆಗೆದಿದ್ದು, ರಾಪುಂಜೆಲ್ ಸಿಂಡ್ರೋಮ್‌ನಿಂದಾಗಿ ಈ ಹುಡುಗಿ ಹಲವಾರು ವರ್ಷಗಳಿಂದ ಹೀಗೆ ಮಾಡುತ್ತಿದ್ದಳು. ಆಪರೇಷನ್ ತಂಡದ ವೈದ್ಯ ಡಾ. ಸಾಹು ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದು, ಅವರು ತಮ್ಮ 40 ವರ್ಷಗಳ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಹೊಟ್ಟೆಯಲ್ಲಿ ಕೂದಲು ಸಂಗ್ರಹವಾಗುತ್ತಿರುವುದನ್ನು ಕಂಡಿದ್ದಾರೆ ಎಂದು ಹೇಳಿದರು. ಏತನ್ಮಧ್ಯೆ, ಸ್ವೀಟಿಯ ಆರೋಗ್ಯ ಸ್ಥಿರವಾಗಿದ್ದು ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ.

ಉಬ್ಬಿದ ಹೊಟ್ಟೆ, ಹಸಿವು ಕಡಿಮೆಯಾಗುವುದು, ತೂಕ ನಷ್ಟ ಮತ್ತು ಮಲಬದ್ಧತೆ ಅಥವಾ ಅತಿಸಾರ ಮುಂತಾದವುಗಳು ರಾಪುಂಜೆಲ್ ಸಿಂಡ್ರೋಮ್ನ ಇತರ ಲಕ್ಷಣಗಳು.

LEAVE A REPLY

Please enter your comment!
Please enter your name here