ಕಳೆದ ವರ್ಷ ರಾಜ್ಯವು ವಿನಾಶಕಾರಿ ಪ್ರವಾಹಕ್ಕೆ ತುತ್ತಾಗುತ್ತಿದ್ದಾಗ ಕರ್ನಾಟಕದಿಂದ ಹೊರಬಂದ ಅತ್ಯಂತ ಹೃದಯಸ್ಪರ್ಶಿ ಕಥೆಗಳಲ್ಲಿ ಇದು ಒಂದು. ಮುಳುಗಿದ ಸೇತುವೆಯೊಂದನ್ನು ಅಡ್ಡಲಾಗಿ ಓಡುತ್ತಿರುವ ಬಾಲಕನ ವಿಡಿಯೋ 2019 ರ ಆಗಸ್ಟ್‌ನಲ್ಲಿ ವೈರಲ್ ಆಗಿತ್ತು. ಅವನು ತನ್ನ ಪ್ರಾಣವನ್ನೇ ಪಣಕ್ಕಿಟ್ಟನು ಮತ್ತು ಪ್ರವಾಹದಿಂದಾಗಿ ಸಿಲುಕಿಕೊಂಡಿದ್ದ ಆಂಬುಲೆನ್ಸ್‌ಗೆ ಮಾರ್ಗದರ್ಶನ ನೀಡಲು ಪ್ರವಾಹಕ್ಕೆ ಸಿಲುಕಿದ ಸೇತುವೆಯ ಉದ್ದಕ್ಕೂ ಓಡಿದನು.

ಉತ್ತರ ಕರ್ನಾಟಕದಲ್ಲಿ ಮಲಪ್ರಭಾ ಭೀಮಾ ಸೇರಿ ಕೃಷ್ಣಾ ನದಿಗಳು ಪ್ರವಾಹಕ್ಕೆ ತುತ್ತಾಗಿ, ಕೃಷ್ಣಾ ನದಿಯ ಅಬ್ಬರಕ್ಕೆ ಯಾದಗಿರಿಯ ದೇವದುರ್ಗದ ಹಳ್ಳ ಕೊಳ್ಳಗಳು ತುಂಬಿ ಕೊಂಡಿತ್ತು. .ವಿಡಿಯೋ ಒಂದರಲ್ಲಿ ದೇವದುರ್ಗದ ಸೇತುವೆಯ ಮೇಲೆ ಉಕ್ಕಿ ಹರಿಯುವ ನೀರಿನ ನಡುವೆ ಬಾಲಕನೊಬ್ಬ ಓಡಿಕೊಂಡು ಆಂಬುಲೆನ್ಸ್ ಗೆ ದಾರಿ ತೋರಿಸುವ ಮೂಲಕ ವೀರತನ ಮೆರೆದಿದ್ದು ಅಂದು ವೈರಲ್ ಆಗಿತ್ತು. ಅಂದು ಕರ್ನಾಟಕದಲ್ಲಿ ನಡೆದ ಹೃದಯಸ್ಪರ್ಶಿ ಘಟನೆ ಅದಾಗಿತ್ತು. ಆ ಬಾಲಕ 12 ವರ್ಷದ ವೆಂಕಟೇಶ್. ತನ್ನ ಪ್ರಾಣವನ್ನೇ ಪಣಕ್ಕಿಟ್ಟನು ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಆಂಬುಲೆನ್ಸ್‌ಗೆ ರಸ್ತೆ ತೋರಿಸಲು ಪ್ರವಾಹಕ್ಕೆ ಸಿಲುಕಿದ ಸೇತುವೆಯ ಉದ್ದಕ್ಕೂ ಓಡಿದನು.

ಆರನೇ ತರಗತಿಯಲ್ಲಿ ಕಲಿಯುತ್ತಿದ್ದ ವೆಂಕಟೇಶ್ ಕೃಷ್ಣಾ ತೀರದಲ್ಲಿ ಸ್ನೇಹಿತರೊಂದಿಗೆ ಆತ ಆಡುತ್ತಿದ್ದನು. ಮೃತದೇಹವನ್ನು ಹೊತ್ತುಕೊಂಡು ಹೋಗುತಿದ್ದ ಆಂಬುಲೆನ್ಸ್ ಚಾಲಕ ಪ್ರವಾಹಕ್ಕೆ ತುತ್ತಾದ ಸೇತುವೆಯ ದಾರಿಗಾಗಿ ಹೆಣಗಾಡುತ್ತಿದ್ದಾಗ, ವೆಂಕಟೇಶ್ ತನ್ನ ಹಿಂಬಾಲಿಸುವಂತೆ ಕೇಳಿಕೊಂಡು ಆಂಬುಲೆನ್ಸ್ ಗೆ ದಾರಿ ಮಾಡಿ ತೋರಿಸುತ್ತಾನೆ.

ಇದೀಗ ವೆಂಕಟೇಶ್ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಭಾಜನನಾಗಿದ್ದಾನೆ. ಜನವರಿ 26 ರಂದು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಾರತೀಯ ಮಕ್ಕಳ ಕಲ್ಯಾಣ ವತಿಯಿಂದ ರಾಷ್ಟ್ರೀಯ ಶೌರ್ಯ ಪ್ರಶಸ್ತಿ 2019 ಅನ್ನು ಪ್ರದಾನ ಮಾಡಲಾಗುವುದು. ದೇಶಾದ್ಯಂತ 22 ಮಕ್ಕಳನ್ನು ಅವರ ಸಾಹಸ ಸಾಧನೆಗಾಗಿ ಈ [ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರತಿ ಪ್ರಶಸ್ತಿ ಪುರಸ್ಕೃತರು ಪದಕ, ಪ್ರಮಾಣಪತ್ರ ಮತ್ತು ಹಣವನ್ನು ಪಡೆಯುತ್ತಾರೆ, ಜೊತೆಗೆ ಲೋಕೋಪಕಾರಿ ಸಂಸ್ಥೆಯಿಂದ ಪದವಿ ಪಡೆಯುವವರೆಗೆ ಶಿಕ್ಷಣ ಪ್ರಾಯೋಜಕತ್ವವನ್ನು ಪಡೆಯಬಹುದು. ವೆಂಕಟೇಶ್ ಅವರ ಸೋದರರ ಪ್ರಕಾರ ಟಿವಿಯಲ್ಲಿ ನೋಡುವಾಗಲೇ ಅವರಿಗೆ ಈ ವಿಷಯ ಗೊತ್ತಾಗಿದ್ದು, ಮನೆಯಲ್ಲಿ ತಾಯಿ ದೇವಮ್ಮ ತುಂಬಾ ಗಾಬರಿ ಗೊಂಡಿದ್ದರು ಮತ್ತು ವೆಂಕಟೇಶ್ ನನ್ನು ಗದರಿಸಿದ್ದರು. ಬಳಿಕ ಅವರು ಅವನ ಸಾಧನೆಯನ್ನು ಮೆಚ್ಚಿಕೊಂಡರು ಎಂದು ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದರು.

LEAVE A REPLY

Please enter your comment!
Please enter your name here