ರಕ್ತದಾನ ಮಾಡಿ ಜೀವ ದಾನ ಮಾಡಬಹುದು. ಆದ್ದರಿಂದಲೇ ರಕ್ತದಾನ ಶ್ರೇಷ್ಠ ದಾನ ಎನ್ನಲಾಗುತ್ತದೆ. ಕೆಲವರು ಭಯ, ತಪ್ಪು ಕಲ್ಪನೆಗಳಿಂದ ರಕ್ತದಾನ ಮಾಡಲು ಹಿಂಜರಿಯುತ್ತಾರೆ. ಆದರೆ ಹುಬ್ಬಳ್ಳಿಯಲ್ಲಿ ಗಂಡು ನಾಯಿಯೊಂದು ಹೆಣ್ಣು ನಾಯಿಗೆ ರಕ್ತ ದಾನ ಮಾಡುವ ಮೂಲಕ ಮನುಷ್ಯ ಕುಲಕ್ಕೆ ದೊಡ್ಡದೊಂದು ಸಂದೇಶ ನೀಡಿದೆ.

ರಕ್ತ ದಾನ ಮಾಡಿದರೆ ನಮ್ಮ ದೇಹದಲ್ಲಿ ರಕ್ತ ಕಡಿಮೆ ಆಗುವುದಿಲ್ಲ. ಬದಲಾಗಿ ರಕ್ತದಾನ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು ಎಂದು ಪದೇ ಪದೇ ವೈದ್ಯರು ಹೇಳಿದರೂ ರಕ್ತ ದಾನ ಮಾಡುವವರ ಸಂಖ್ಯೆ ಕಡಿಮೆಯೇ ಎಂದು ಹೇಳಬಹುದು. ಹುಬ್ಬಳ್ಳಿಯ ರಾಣಾ ಎನ್ನುವ ಶ್ವಾನ ರೋಟಿ ಎನ್ನುವ ಹೆಣ್ಣು ಶ್ವಾನಕ್ಕೆ ರಕ್ತ ದಾನ ಮಾಡಿ ಮಾದರಿಯಾಗಿದೆ. ರೋಟಿ ಕಾಮಾಲೆ ರೋಗದಿಂದ ಬಳಲುತ್ತಿದ್ದು ಅದಕ್ಕೆ ರಕ್ತದ ಅವಶ್ಯಕೆತೆ ಇತ್ತು. ಈ ವಿಷಯ ತಿಳಿದು ಲ್ಯಾಬ್ರಡಾರ್ ತಳಿಯ ರಾಣಾ ಶ್ವಾನದ ಮಾಲೀಕ ಮನೀಶ್ ರಕ್ತದಾನ ಮಾಡಲು ಮುಂದೆ ಬಂದರು. ಹೀಗೆ ಮಾಲೀಕ ಆಜ್ಞೆ ಪಾಲಿಸಿ ರಾಣಾ ರೋಟಿಯ ಜೀವ ಉಳಿಸಿದೆ. ರಾಣಾ ಶ್ವಾನ ಮಾಲೀಕರಾದ ಮನೀಶ್ ಕೂಡ ರಕ್ತ ದಾನಿ. ಬಿ ನೆಗೆಟಿವ್ ರಕ್ತ ಗ್ರೂಪ್ ಹೊಂದಿದ ಅವರು ರಕ್ತದಾನದ ಮಹತ್ವವನ್ನು ಅರಿತವರು.

courtesy : Prajavani

ಒಬ್ಬ ವ್ಯಕ್ತಿ ಸ್ವಯಿಚ್ಛೆಯಿಂದ ರಕ್ತ ನೀಡಲು ಬಂದಾಗ ರಕ್ತದಾನ ಪ್ರಕ್ರಿಯೆ ನಡೆಯುವುದು. ಅಂತಹ ರಕ್ತವನ್ನು ರಕ್ತವರ್ಗಾವಣೆಗಳಿಗೆ ಬಳಸಲಾಗುತ್ತದೆ ಅಥವಾ ವಿಭಾಗೀಕರಣ ಎನ್ನುವ ಪ್ರಕ್ರಿಯೆಯ ಮೂಲಕ ಔಷಧಿ ತಯಾರಿಕೆಗಾಗಿ ಬಳಸಲಾಗುತ್ತದೆ.

ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಬಹುತೇಕ ರಕ್ತದಾನಿಗಳು ಹಣವನ್ನು ತೆಗೆದುಕೊಳ್ಳದೆ ಸ್ವ ಇಚ್ಛೆಯಿಂದ ಸಮೂಹ ಪೂರೈಕೆಗೆಂದು ರಕ್ತದಾನ ಮಾಡುತ್ತಾರೆ. ಬಡ ರಾಷ್ಟ್ರಗಳಲ್ಲಿ ವ್ಯವಸ್ಥಿತ ರಕ್ತಪೂರೈಕೆಯು ಬಹಳ ಕಡಿಮೆ ಮತ್ತು ರಕ್ತದಾನಿಗಳು ತಮ್ಮ ಕುಟುಂಬದವರಿಗೆ ಅಥವಾ ಸ್ನೇಹಿತರಿಗೆ ರಕ್ತವರ್ಗಾವಣೆಯ ಅಗತ್ಯ ಇದ್ದಾಗ ಮಾತ್ರ ರಕ್ತದಾನ ಮಾಡುತ್ತಾರೆ. ಬಹುತೇಕರು ದಾನವಾಗಿ ನೀಡುತ್ತಾರೆ ಆದರೂ ಕೆಲವರು ಹಣಕ್ಕಾಗಿ ಮತ್ತು ಕೆಲವು ಸಂದರ್ಭಗಳಲ್ಲಿ ಸಂಬಳ ಸಹಿತ ರಜೆಯಂತಹಾ ಸವಲತ್ತಿಗೋಸ್ಕರ ಮಾಡುತ್ತಾರೆ. ರಕ್ತದಾನಿಗಳು ತಮ್ಮದೇ ಭವಿಷ್ಯದ ಅಗತ್ಯಕ್ಕಾಗಿಯೂ ತೆಗೆದಿರಿಸಬಹುದು. ರಕ್ತದಾನ ಮಾಡುವುದು ಸುರಕ್ಷಿತವಾದರೂ, ಸೂಜಿ ಚುಚ್ಚುವಾಗ ಅಥವಾ ಆಯಾಸವಾದಾಗ ಕೆಲವರಿಗೆ ನೋವಾಗುವ ಅನುಭವವಾಗಬಹುದು.

ಸಂಭಾವ್ಯ ರಕ್ತ ದಾನಿಗಳು ತಮ್ಮ ರಕ್ತವು ದಾನಮಾಡಲು ಅರ್ಹವಾಗದಿರಬಹುದಾದ ಸಾಧ್ಯತೆ ಇದೆಯೇ ಎಂಬ ಪರೀಕ್ಷೆಗೊಳಪಡುತ್ತಾರೆ. ಈ ಪರೀಕ್ಷೆಗಳಲ್ಲಿ ರಕ್ತ ವರ್ಗಾವಣೆಯಿಂದ ಹರಡಬಹುದಾದ HIV ಮತ್ತು ವೈರಸ್‌ ಪೂರಿತ ಹೆಪಟೈಟಿಸ್‌ನಂತಹಾ ರೋಗಗಳ ಸಾಧ್ಯತೆಯ ಪರೀಕ್ಷೆಯೂ ಇರುತ್ತದೆ. ರಕ್ತದಾನ ಸಂದರ್ಭದಲ್ಲಿ ದಾನಿಗಳಲ್ಲಿ ಅವರ ಆರೋಗ್ಯದ ಇತಿಹಾಸದ ಬಗ್ಗೆ ವಿಚಾರಿಸಲಾಗುವುದು ಮತ್ತು ರಕ್ತ ಕೊಡಲು ಆಕೆ ಅಥವಾ ಆತ ಆರೋಗ್ಯವಂತರೇ ಹಾಗೂ ರಕ್ತದಾನದಿಂದ ಅವರಿಗೆ ತೊಂದರೆಯಾಗುವುದೊ ಇಲ್ಲವೊ ಎಂಬುವುದನ್ನು ತಿಳಿಯಲು ಅವರ ದೈಹಿಕ ಪರೀಕ್ಷೆ ನಡೆಸಲಾಗುವುದು. ಆತ ಅಥವಾ ಆಕೆ ಏನನ್ನು ದಾನ ಮಾಡುತ್ತಾರೆ ಎಂಬುದರ ಮೇಲೆ ಮತ್ತು ದಾನ ನಡೆಯುವ ದೇಶದ ನೀತಿ ನಿಯಮಾವಳಿಗಳ ಮೇಲೆ ದಾನಗಳ ನಡುವಿನ ಅವಧಿಯು ತಿಂಗಳುಗಳು ಮತ್ತು ದಿನಗಳ ಮಟ್ಟಿಗೆ ವ್ಯತ್ಯಾಸವಾಗಬಹುದು. ಉದಾಹರಣೆಗೆ, ಯುನೈಟೆಡ್ ಸ್ಟೇಟ್ಸ್‌‌ನಲ್ಲಿ ದಾನಿಯು ಒಂದು ಬಾರಿ ರಕ್ತದಾನ ಮಾಡಿದರೆ ಎಂಟುವಾರಗಳ (56 ದಿನಗಳು) ನಂತರ ಮತ್ತೊಮ್ಮೆ ಸಂಪೂರ್ಣ ರಕ್ತದಾನ ಮಾಡಲು ಅರ್ಹ ಆದರೆ ರಕ್ತದಕಿರುಬಿಲ್ಲೆ ದಾನಗಳಿಗೆ ಮೂರು ದಿನಗಳ ಸಡಿಲಿಕೆ ಸಾಕಾಗುತ್ತದೆ.

ಪಡೆದುಕೊಳ್ಳುವ ರಕ್ತದ ಪ್ರಮಾಣ ಹಾಗೂ ವಿಧಾನಗಳು ಬದಲಾವಣೆಗಳಾಗಬಹುದು, ಆದರೆ ಒಬ್ಬ ವ್ಯಕ್ತಿ 450 ಮಿಲಿಲೀಟರ್‌ಗಳಷ್ಟು (ಅಥವಾ ಒಂದು US ಪಿಂಟ್) ಸಂಪೂರ್ಣ ರಕ್ತವನ್ನು ತಮ್ಮ ರಕ್ತದಿಂದ ನೀಡಬಹುದು. ರಕ್ತ ಸಂಗ್ರಹಣೆಯನ್ನು ಸಾಮಾನ್ಯ ರೂಢಿಯಂತೆ ಅಥವಾ ಸ್ವಯಂಚಾಲಿತ ರಕ್ತಸಂಗ್ರಹಣ ಯಂತ್ರದಿಂದಲೂ ರಕ್ತದ ನಿಗದಿತ ಭಾಗಗಳನ್ನು ಮಾತ್ರ ಸಂಗ್ರಹಿಸಬಹುದು. ರಕ್ತವರ್ಗಾವಣೆ ನಡೆಸಲು ಬಳಸಲಾಗುವ ರಕ್ತದ ಬಹುತೇಕ ಘಟಕಗಳ ಶೇಖರಣಾ ಅವಧಿ ಅತಿ ಕಡಿಮೆ ಅವುಗಳ ನಿರಂತರ ಪೂರೈಕೆಯನ್ನು ಮಾಡುವುದು ಚಿರಸ್ಥಾಯಿ ಸಮಸ್ಯೆಯಾಗಿದೆ.

LEAVE A REPLY

Please enter your comment!
Please enter your name here