ನ್ಯುಮೋನಿಯಾ ಬೆಳವಣಿಗೆಯ ಆರಂಭಿಕ ಹಂತದಲ್ಲಿರುವ ಕೋವಿಡ್ 19 ರೋಗಿಗಳಿಗೆ ನಾಲ್ಕು ಡ್ರಗ್ ಮಿಶ್ರಣ ಮಾಡಿದ ಔಷಧವು ಕೇರಳ ಆಸ್ಪತ್ರೆಯಲ್ಲಿ ರೋಗಿಗಳ ಜೀವ ಉಳಿಸುವಲ್ಲಿ ಸಾಕಷ್ಟು ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತಿದೆ. ಮಾತ್ರವಲ್ಲ, ಇದು ಸಾಂಕ್ರಾಮಿಕ ರೋಗಕ್ಕೆ ಚಿಕಿತ್ಸೆ ನೀಡುವ ಅಂತರರಾಷ್ಟ್ರೀಯ ಮಾದರಿಯಾಗಬಹುದು ಎಂದು ವೈದ್ಯರು ಖಚಿತಪಡಿಸಿದ್ದಾರೆ.

COVID-19 ರೋಗಿಗಳಿಗೆ ತೀವ್ರವಾದ ನಿಗಾ ಮತ್ತು ಸೂಕ್ತ ಪರೀಕ್ಷೆಗಳು ಬೇಕಾಗುತ್ತವೆ, ಆದರೆ ನಾಲ್ಕು ಡ್ರಗ್ ಆಧರಿಸಿದ ಮಿಶ್ರಣವು ಉತ್ತಮ ಫಲಿತಾಂಶ ನೀಡಿದೆ. ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ (ಜಿಎಂಸಿ) ಯಶಸ್ಸಿನ ಕಥೆಗಳ ನಂತರ ಇದು ಜಾಗತಿಕ ಮನ್ನಣೆಯನ್ನು ಗಳಿಸುತ್ತಿದೆ ಎಂದು ಎರ್ನಾಕುಲಂನ ಜಿಎಂಸಿಯ ವೈದ್ಯರು ತಿಳಿಸಿದ್ದಾರೆ.

57 ವರ್ಷದ ಪ್ರವಾಸಿಗನನ್ನು ದುಬೈಗೆ ವಿಮಾನ ಹತ್ತಲು ಹೋಗುವ ಸ್ವಲ್ಪ ಮುಂಚಿತವಾಗಿ ಮಾರ್ಚ್ 15 ರಂದು ಕಲಾಮಶೇರಿಯಲ್ಲಿರುವ ಆಸ್ಪತ್ರೆಗೆ ಕರೆತರಲಾಯಿತು.
ಆಸ್ಪತ್ರೆಯಲ್ಲಿ 17 ದಿನಗಳ ಐಸೊಲೇಶನ್ ನಿಂದ COVID-19 ನಿಂದ ಚೇತರಿಸಿಕೊಳ್ಳಲು ಸಾಧ್ಯವಾಗಿದೆ.

ಡಾ‌.ಜಾಕೋಬ್ ಮತ್ತು ಫತಹುದ್ದೀನ್ ರವರು ತಮ್ಮ ಹೇಳಿಕೆಯಲ್ಲಿ ಈ ಅಂಶವನ್ನು ದೃಢೀಕರಿಸಿದ್ದು, ಎಚ್‌ಐವಿ ಆಂಟಿ-ವೈರಸ್, ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಅಜಿಥ್ರೊಮೈಸಿನ್ ಮಿಶ್ರಣ ಮಾಡಿದ ಡ್ರಗ್ ನಿಂದ ರೋಗಿ ತುಂಬಾ ಚೇತರಿಸಿಕೊಂಡಿದ್ದಾರೆ.

Leave a Reply