ಕೊಚ್ಚಿ: ಹಿಂದೂ ಜೋಡಿಯ ಮದುವೆಯನ್ನು ಮಸೀದಿಯಲ್ಲಿ ಸ್ಥಳಾವಕಾಶ ನೀಡಿ ಸೌಹಾರ್ದತೆ ಮಾನವೀಯತೆ ತೋರಿದ ಘಟನೆ ಕೇರಳದಿಂದ ವರದಿಯಾಗಿದೆ. ರವಿವಾರ ಆಲಪ್ಪುಳ ಜಿಲ್ಲೆಯ ಕಾಯಂಕುಳಂನ ಚೆರುವಳ್ಳಿ ಜಮಾಅತ್ ಮಸೀದಿಯಲ್ಲಿ ಈ ದಂಪತಿ ಹಸೆಮಣೆಯೇರಿದರು.

ಹಿಂದೂ ಸಂಪ್ರದಾಯದಂತೆ ನಡೆದ ಈ ವಿವಾಹ ಕೂಟದಲ್ಲಿ ಸರ್ವಧರ್ಮೀಯರು ಪಾಲ್ಗೊಂಡಿದ್ದರು. ಮಸೀದಿಯ ಆವರಣದಲ್ಲಿ ಪುರೋಹಿತರ ಮಾರ್ಗದರ್ಶನದಂತೆ ಅಂಜು ಮತ್ತು ಶರತ್ ಜೋಡಿಯ ವಿವಾಹ ನೆರವೇರಿತು. ಮದುವೆಯಲ್ಲಿ ಸುಮಾರು 1000 ಮಂದಿ ಭಾಗಿಯಾಗಿದ್ದರು. ಮಾತ್ರವಲ್ಲ ಕೇರಳ ಸಿಎಂ ಪಿಣರಾಯಿ ವಿಜಯನ್ ಕೂಡ ಈ ದಂಪತಿಗಳಿಗೆ ಶುಭ ಹಾರೈಕೆ ನೀಡಿದ್ದು, ಮದುವೆಯ ಫೋಟೋವನ್ನೂ ಶೇರ್ ಮಾಡಿದ್ದಾರೆ. ಬಡತನದ ಹಿನ್ನೆಲೆಯಲ್ಲಿ ಅಂಜು ಅವರ ತಾಯಿ ಮಸೀದಿ ಕಮಿಟಿಯ ನೆರವು ಕೋರಿದ್ದರು. ಕೂಡಲೇ ಅದಕ್ಕೊಪ್ಪಿದ ಮಸೀದಿ ಕಮಿಟಿ ನೆರವು ನೀಡಿದೆ. ಇಷ್ಟೇ ಅಲ್ಲದೆ ಜಮಾಅತ್ ಸಮಿತಿಯು ವಧು ಅಂಜುಗೆ 10 ಪವನ್ ಚಿನ್ನ ಮತ್ತು 2 ಲಕ್ಷ ರೂ. ನೀಡಿದೆ.

LEAVE A REPLY

Please enter your comment!
Please enter your name here