ಒಬ್ಬ ವ್ಯಕ್ತಿ ಮತ್ತು ಅವರ ಮಗ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ಯ ಪರ ಇದ್ದ ಕಾರಣ ಅವರನ್ನು ಮಸೀದಿಯ ಇಮಾಮರು ನಮಾಜ್ ಮಾಡುವುದರಿಂದ ತಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಉತ್ತರಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವೃದ್ಧ ಇದ್ರೀಸ್ ಅಹ್ಮದ್ ಈ ಬಗ್ಗೆ ಮೊರಾದಾಬಾದ್ ಪೊಲೀಸ್ ಠಾಣೆಯಲ್ಲಿ ಸಿರ್ಸಖೇಡಾದ ‘ಚಾಂದ್’ ಮಸೀದಿಯ ಇಮಾಮ್ ಅನೀಸ್ ಮಿಯಾನ್ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇಮಾಮರು ಮಸೀದಿಯಲ್ಲಿ ಸ್ಥಳೀಯರನ್ನು ಪ್ರಚೋದಿಸಿದ ಇಮಾಮರು, ನಮ್ಮನ್ನು ನಮಾಜ್ ನಿರ್ವಹಿಸಲು ತಡೆದಿದ್ದಾರೆ ಮತ್ತು ಸಿಎಎ ಕಾನೂನಿಗೆ ಬೆಂಬಲ ನೀಡಿದರೆ ಭೀಕರ ಪರಿಣಾಮ ಎದುರಿಸಬೇಕಾದೀತು ಎಂಬ ಬೆದರಿಕೆ ಹಾಕಿದ್ದಾರೆ ಎಂದು ಇದ್ರೀಸ್ ಅಹ್ಮದ್ ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಮಸೀದಿಯ ಇಮಾಮರು ನಿರಾಕರಿಸಿದ್ದು ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.

ನನಗೂ ಅವರಿಗೂ ಕೆಲವು ಧಾರ್ಮಿಕ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಇದೆ. ಒಮ್ಮೆ ಈ ಬಗ್ಗೆ ನಮ್ಮ ಮಧ್ಯೆ ವಾದವೂ ನಡೆದಿದ್ದು, ಈ ವೇಳೆ ಅವರ ಮಗ ಜೊತೆಗಿದ್ದರು. ಹೀಗೆ ವಾದ ಮಾಡುವಾಗ ಅವರ ಮಗ ನನಗೆ ತೊಂದರೆ ಕೊಡಲು ಪ್ರಾರಂಭಿಸಿದನು ಎಂದು ಇಮಾಮರು ತಿರುಗಿ ಆರೋಪಿಸಿದ್ದಾರೆ. ಮೊರಾದಾಬಾದ್ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಎಸ್ಪಿ ಅಮಿತ್ ಕುಮಾರ್ ಆನಂದ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here