ಯುಪಿ : ಹೆರಿಗೆಗಾಗಿ ಆಸ್ಪತ್ರೆಗೆ ಬಂದ ತುಂಬು ಗರ್ಭಿಣಿ ಮಹಿಳೆಯನ್ನು ಆಸ್ಪತೆಯ ವೈದ್ಯರು ದಾಖಲಿಸಿಕೊಳ್ಳಲು ನಿರಾಕರಿಸಿದ ಪರಿಣಾಮವಾಗಿ ಮಹಿಳೆ ಬಯಲಲ್ಲೇ ಮಗುವಿಗೆ ಜನ್ಮ ನೀಡಿದ ದಾರುಣ ಘಟನೆ ಗುರುವಾರ ರಾತ್ರಿ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರಪ್ರದೇಶದ ಬಹರಾಯಿಚ್ ಜಿಲ್ಲಾ ಮಹಿಳಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆ ತಂದಿದ್ದರು. ಮಹಿಳೆ ಹೆರಿಗೆ ನೋವಿನಂದ ಚಡಪಡಿಸುತ್ತಿದ್ದರೂ ವೈದ್ಯರು ಕೇರ್ ಮಾಡಲಿಲ್ಲ, ಸಿಬ್ಬಂದಿಗಳು ಉಪಚಾರ ಮಾಡಲಿಲ್ಲ. ಹೆರಿಗೆಯ ಸಂದರ್ಭದಲ್ಲಿ ಇಬ್ಬರು ಮಹಿಳೆಯರು ಬಟ್ಟೆಯನ್ನು ಸುತ್ತ ಪರದೆಯನ್ನಾಗಿ ಮಾಡಿ ಮಹಿಳೆಗೆ ಹೆರಿಗೆಗೆ ನೆರವಾಗಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲು ನಿರಾಕರಿಸಿದವರ ಬಗ್ಗೆ ವಿವರ ಪಡೆದು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗವುದು ಎಂದು ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಿ.ಕೆ.ಸಿಂಗ್ ಹೇಳಿದ್ದಾರೆ.

Bahraich: Woman gave birth to a child on street outside govt hospital after doctors refused to admit her to hospital last night. Chief Medical Superintendent DK Singh says, “Staff refused to attend her as she was out of hospital premises. I will take action against the guilty”. pic.twitter.com/4j2vE9XX66

LEAVE A REPLY

Please enter your comment!
Please enter your name here