ಅಂಗವೈಕಲ್ಯದಿಂದ ಜೀವನ ನಡೆಸುವುದು ಅಷ್ಟು ಸುಲಭದ ಮಾತಲ್ಲ. ಅದು ಮನುಷ್ಯ ಆಗಿರಲಿ ಅಥವಾ ಪ್ರಾಣಿಗಳೇ ಆಗಿರಲಿ. ವಿಜ್ಞಾನ ಪ್ರಗತಿ ಹೊಂದಿದನಂತೆ ಇದಕ್ಕೆ ವಿಶಿಷ್ಟ ಪ್ರಯೋಗಗಳನ್ನು ಮಾಡಲಾಗುತ್ತದೆ ಮತ್ತು ಅವರ ಬದುಕಿಗೆ ಆಸರೆಯಾಗುವಂತನಂತಹ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ.

ಥೈಲ್ಯಾಂಡ್‌ನ ವ್ಯಕ್ತಿಯೊಬ್ಬ ಅಂಗವಿಕಲ ಆನೆಗೆ ಆಸರೆ ಆಗುವಂತಹ ವಿಶಿಷ್ಟ ಕೆಲಸವನ್ನು ಮಾಡಿದ್ದು ಅದರ ವಿಡಿಯೋ ತುಂಬಾ ವೈರಲ್ ಆಗಿದೆ.

ಥಿಯೋ ಶಾಂತೋನಾಸ್ ಈ ವೀಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು ಕಾಲಿಲ್ಲದ ಆನೆಗೆ ಕೃತಕ ಕಾಲು ತಯಾರಿಸಿದ ಈ ವಿಶಿಷ್ಟ ವಿಡಿಯೋ ಜನರ ಗಮನ ಸೆಳೆದಿದೆ. ಈ ಕೃತಕ ಕಾಲನ್ನು ತಯಾರಿಸಲು ಈ ವ್ಯಕ್ತಿ ತುಂಬಾ ಸಮಯವನ್ನು ವ್ಯಯಿಸಿದ್ದಾರೆ. ಮಾತ್ರವಲ್ಲದೆ, ಈ ಕೃತಕ ಕಾಲುಗಳನ್ನು ಅವರು ಬಹಳ ವೈಜ್ಞಾನಿಕ ರೀತಿಯಲ್ಲಿ ಸಿದ್ಧಪಡಿಸಿದ್ದಾರೆ. ಇದನ್ನು ಧರಿಸುವ ಮೂಲಕ ಆನೆ ಸುಲಭವಾಗಿ ನಡೆಯುತ್ತಿದೆ.

ವಿಡಿಯೋ ನೋಡಿ

https://twitter.com/i/status/1329309958387580931

ಐಎಎಸ್ ಸುಪ್ರಿಯಾ ಸಾಹು ಕೂಡ ಈ ವಿಡಿಯೋ ಶೇರ್ ಮಾಡಿದ್ದು, ಕೃತಕ ಕಾಲುಗಳ ಸಹಾಯ ಆನೆಯ ನಡಿಗೆಗೆ ಹೊಸ ಜೀವನವನ್ನು ನೀಡುವಂತಿದೆ. ಪ್ರಾಣಿಗಳ ಜಗತ್ತಿಗೆ ಇದು ದೊಡ್ಡ ಕೊಡುಗೆಯಾಗಿದೆ. ಇದನ್ನು ಸಾಧ್ಯವಾಗಿಸಿದ ಜನರಿಗೆ ನಮಸ್ಕಾರ ಎಂದು ಬರೆದಿದ್ದಾರೆ.

Leave a Reply