ಯುಎಸ್: ಕಾನೂನಿನ ವಿಷಯದಲ್ಲಿ ಶಾಸನ ಮತ್ತು ಅನುಷ್ಠಾನ ಒಂದಕ್ಕೊಂದು ಅನುಭಾವ ಸಂಬಂಧ ಇದೆ. ಎರಡೂ ನ್ಯಾಯವನ್ನು ಆಧರಿಸಿಕೊಂಡಿದೆ. ಆದ್ದರಿಂದ ಕಾನೂನಿನಲ್ಲಿ ನ್ಯಾಯಕ್ಕೆ ವಿಶೇಷ ಸ್ಥಾನಮಾನವಿದೆ. ವಿಶ್ವದ ಅತ್ಯಂತ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಹಾರ್ವರ್ಡ್ ಲಾ ಸ್ಕೂಲ್ ( ವಿಶ್ವದ ನಂ. 7), ಅದರ ಬೋಧನಾ ವಿಭಾಗದ ಗ್ರಂಥಾಲಯದ ಪ್ರವೇಶದ್ವಾರದಲ್ಲಿ ನ್ಯಾಯದ ಬಗ್ಗೆ ಉಲ್ಲೇಖ ಇದೆ. ಪ್ರವೇಶದ್ವಾರದಲ್ಲಿ ಕುರಾನಿನ ಅಧ್ಯಾಯ ಸೂರಾ ನಿಸಾ(ಮಹಿಳೆ) ದ ಸೂಕ್ತವನ್ನು ಉಲ್ಲೇಖಿಸಲಾಗಿದೆ. ಇದು ನ್ಯಾಯದ ಬಗ್ಗೆ ಅತ್ಯಂತ ದೊಡ್ಡ ಅಭಿವ್ಯಕ್ತಿಯಾಗಿದೆ ಎಂದು ವ್ಯಾಖ್ಯಾನಿಸಲಾಗಿದೆ.

ಅದು ಹೀಗಿದೆ,

ಸೂಕ್ತ : 135
يَا أَيُّهَا الَّذِينَ آمَنُوا كُونُوا قَوَّامِينَ بِالْقِسْطِ شُهَدَاءَ لِلَّهِ وَلَوْ عَلَىٰ أَنْفُسِكُمْ أَوِ الْوَالِدَيْنِ وَالْأَقْرَبِينَ ۚ إِنْ يَكُنْ غَنِيًّا أَوْ فَقِيرًا فَاللَّهُ أَوْلَىٰ بِهِمَا ۖ فَلَا تَتَّبِعُوا الْهَوَىٰ أَنْ تَعْدِلُوا ۚ وَإِنْ تَلْوُوا أَوْ تُعْرِضُوا فَإِنَّ اللَّهَ كَانَ بِمَا تَعْمَلُونَ خَبِيرًا

ಓ ಸತ್ಯವಿಶ್ವಾಸಿಗಳೇ, ನೀವು ನ್ಯಾಯದ ಧ್ವಜವಾಹಕರೂ, ಅಲ್ಲಾಹನಿ(ಸೃಷ್ಟಿಕರ್ತ)ಗಾಗಿ ಸಾಕ್ಷ್ಯವಹಿಸುವವರೂ ಆಗಿರಿ. ನಿಮ್ಮ ನ್ಯಾಯ ಮತ್ತು ಸಾಕ್ಷ್ಯವು ಸ್ವತಃ ನಿಮ್ಮ ಅಥವಾ ನಿಮ್ಮ ಮಾತಾಪಿತರ ಮತ್ತು ನಿಮ್ಮ ಸಂಬಂಧಿಕರ ವಿರುದ್ಧವಾಗಿದ್ದರೂ ಸರಿಯೇ. ಕಕ್ಷಿಯು ಧನಿಕನಿರಲಿ ಅಥವಾ ಬಡವನಿರಲಿ ನಿಮಗಿಂತ ಹೆಚ್ಚಾಗಿ ಅಲ್ಲಾಹನು(ದೇವರು,ಸೃಷ್ಟಿಕರ್ತ) ಅವರ ಹಿತಚಿಂತಕನಾಗಿರುತ್ತಾನೆ. ಆದುದರಿಂದ ನಿಮ್ಮ ಚಿತ್ತಾಸಕ್ತಿಯ ಅನುಸರಣೆಯಲ್ಲಿ ನ್ಯಾಯ ಪರಿಪಾಲನೆಯಿಂದ ಸರಿಯಬೇಡಿರಿ. ನೀವು ಗೂಢಾರ್ಥದ ಮಾತುಗಳನ್ನಾಡಿದರೆ ಅಥವಾ ಸತ್ಯದಿಂದ ನುಣುಚಿಕೊಂಡರೆ, ನಿಶ್ಚಯವಾಗಿಯೂ ನೀವು ಮಾಡುತ್ತಿರುವ ಕರ್ಮಗಳ ಅರಿವು ಅಲ್ಲಾಹನಿಗಿದೆ(ಸೃಷ್ಟಿಕರ್ತನಿಗೆ)ಯೆಂಬುದು ಚೆನ್ನಾಗಿ ತಿಳಿದಿರಲಿ. (ಅಧ್ಯಾಯ 4: ಅನ್ನಿಸಾ)

ಈ ಮೇಲಿನ ಸೂಕ್ತವನ್ನು ಗೋಡೆಯ ಮೇಲೆ ಹಾಕಲಾಗಿದೆ. ಸುದ್ದಿಯ ಮೊದಲ ಮಾಧ್ಯಮ ವರದಿಗಳು ಫೆಬ್ರವರಿ 2014 ರಲ್ಲಿ ಬಂದಿದ್ದರೂ, ಆದರೆ ಈ ವಾರ ನಮ್ಮ ನ್ಯೂಸ್‌ಫೀಡ್‌ನಲ್ಲಿ ಸುದ್ದಿ ಪುನರುಜ್ಜೀವನಗೊಂಡಿತು. ವಿಶೇಷವಾಗಿ ಯು.ಎಸ್ನಲ್ಲಿ ಹೆಚ್ಚುತ್ತಿರುವ ಇಸ್ಲಾಮೋಫೋಬಿಯಾದ ಯುಗದಲ್ಲಿ ಇದು ಮತ್ತೆ ಮುಂದೆ ಬಂದಿದೆ.

ಯೂನಿವರ್ಸಿಟಿಯ ಪ್ರಕಾರ, ಕುರಾನ್ ದೈವಿಕ ಗ್ರಂಥ, ಇದು ಇದು ಈ ಬ್ರಹ್ಮಾಂಡದ ಸೃಷ್ಟಿಕರ್ತನಿಂದ ಬಂದಿದ್ದು, ಅದರಲ್ಲಿ ಯಾವುದೇ ಸಂದೇಹ ಇಲ್ಲ. ಇದು ನಮಗೆ ಸನ್ಮಾರ್ಗವನ್ನು ತೋರಿಸುತ್ತದೆ. ಕುರಾನ್ ದೈವಿಕ ಗ್ರಂಥ ಮತ್ತು ಇಸ್ಲಾಂ ನಲ್ಲಿ ಅನ್ಯಾಯಕ್ಕೆ ಯಾವುದೇ ಸ್ಥಾನವಿಲ್ಲ ಎಂದು ಮುಸ್ಲಿಮರು ನಂಬುತ್ತಾರೆ.

Source: Harvard Law School Library

source : https://stepfeed.com/

LEAVE A REPLY

Please enter your comment!
Please enter your name here