Representational Image

ಮೆಕ್ಸಿಕೋ : ಅತ್ಯಾಚಾರದಿಂದ ಯಾವ ಹೆಣ್ಣು ಮಕ್ಕಳೂ ಇಂದಿನ ಕಾಲದಲ್ಲಿ ಸುರಕ್ಷಿತರಾಗಿಲ್ಲ. ಮನೆಯಲ್ಲೂ ಅಸುರಕ್ಷಿತತೆ ಎದುರಿಸುವ ಸನ್ನಿವೇಶಗಳು ಸಮಾಜದಲ್ಲಿ ಘಟಿಸುತ್ತಿವೆ. ಮೆಕ್ಸಿಕೋದಲ್ಲಿ ಆರು ವರ್ಷದ ಬಾಲೆಯನ್ನು ರೇಪ್ ಮಾಡಿ ಕೊಂಡಿದ್ದಾನೆ ಎಂಬ ಶಂಕೆಯ ಮೇಲೆ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರು ಸುತ್ತು ಕೊಂದಿದ್ದಾರೆ. ಅಲ್ಫ್ರೆಡೊ ಎಂಬ ವ್ಯಕ್ತಿಯನ್ನು ಚಿಯಾಪಾಸ್ ಗ್ರಾಮದಲ್ಲಿ ಬರ್ಬರವಾಗಿ ಕೊಲ್ಲಲಾಗಿದೆ.

ಜನವರಿ 9 ರಂದು ಬಾಲಕಿ ಕಾಣೆಯಾಗಿದ್ದು, ಹುಡುಕಾಟದ ಬಳಿಕ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದರು. ಮರುದಿನ ಬಾಲಕಿ ಶವವಾಗಿ ರಸ್ತೆಯಲ್ಲಿ ಪತ್ತೆಯಾಗಿದ್ದಳು. ಬಾಲಕಿಯ ಸಂಬಂಧಿಕರು ಆಲ್ಫ್ರೆಡೋ ರೊಬ್ಲೆರೊ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದರು. ಪೊಲೀಸರಿಗೆ ಒಪ್ಪಿಸಿದರೆ ತನಿಖೆ ನಡೆದು ನ್ಯಾಯ ಸಿಗಲಿಕ್ಕಿಲ ಎಂದು ಗ್ರಾಮಸ್ಥರೇ ಹಿಡಿದು ಕಂಬಕ್ಕೆ ಕಟ್ಟಿ ಶಿಕ್ಷಿಸಿದ್ದಾರೆ. ಆತ ಅತ್ಯಾಚಾರ ಮತ್ತು ಕೊಲೆಗೆ ಯಾವುದೇ ಪುರಾವೆಗಳಿಲ್ಲ. ಆದರೂ ಗ್ರಾಮಸ್ಥರು ಆತನನ್ನು ಕೊಂದಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Leave a Reply