ಉಗಾಂಡದ ಇಮಾಮರೊಬ್ಬರು ಇತ್ತೀಚಿಗೆ ಬಹಳ ಆಡಂಬರದಿಂದ ಮದುವೆಯಾಗಿದ್ದರು. ಆದರೆ ಇದೀಗ ಅವರಿಗೆ ವಿವಾಹದ ಹೆಸರಿನಲ್ಲಿ ಮೋಸ ಮಾಡಲಾಗಿದೆ. ತಾನು ಮದುವೆಯಾದ ವಧು ಮಹಿಳೆ ಅಲ್ಲ, ಬದಲಾಗಿ ಪುರುಷ ಎಂದು ಅವರಿಗೆ ಅರಿವಾಗಿದೆ. ಇದೀಗ ತಾನು ಮದುವೆಯಾದ ವಧುವಿನ ಮೇಲೆಯೇ ಇಮಾಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ಇದರ ನಂತರ ಪೊಲೀಸರು ಆ ವ್ಯಕ್ತಿಯನ್ನು ತನಿಖೆ ಮಾಡಿ ಆತ ಕಳ್ಳನೆಂದು ತಿಳಿದುಬಂದಿದೆ.  ಉಗಾಂಡಾದ ಕೆಯುಂಗಾ ಜಿಲ್ಲೆಯ ಇಮಾಮ್ ಶೇಖ್ ಮೊಹಮ್ಮದ್ ಮುತುಂಬಾ ಎರಡು ವಾರಗಳ ಹಿಂದೆ ಮೆರವಣಿಗೆ ನಡೆಸಿ ಮದುವೆಯಾಗಿದ್ದರು.ಮದುವೆಯ ಬಳಿಕ ವಧುವನ್ನು ಅವರು ಮನೆಗೆ ಕರೆದು ಕೊಂಡು ಬಂದರು. ಆದರೆ ಪೊಲೀಸರು ಇಮಾಮ್ ರವರ ಮನೆಗೆ ಬಂದರು. ಪೊಲೀಸ್ ತಂಡದಲ್ಲಿ ಮಹಿಳಾ ಅಧಿಕಾರಿಯೂ ಇದ್ದರು.

ನಾವು ಟಿವಿ ಮತ್ತು ಬಟ್ಟೆಗಳನ್ನು ಕದ್ದ ಕಳ್ಳನನ್ನು ಹುಡುಕುತ್ತಿದ್ದೇವೆ ಎಂದು ಪೊಲೀಸರು ಇಮಾಮ್‌ಗೆ ತಿಳಿಸಿದರು. ಇಮಾಮ್ ರವರ ಪತ್ನಿ ಮಹಿಳೆಯಲ್ಲ ಎಂದು ಪೊಲೀಸರು ಶಂಕಿಸಿದ್ದಾರೆ. ಇಮಾಮ್ ತನ್ನ ಹೊಸ ವಧುವನ್ನು ಮಹಿಳಾ ಪೊಲೀಸ್ ಅಧಿಕಾರಿಯ ಮುಂದೆ ಹಾಜರುಪಡಿಸಿದರು. ಮಹಿಳಾ ಪೊಲೀಸಧಿಕಾರಿಗಳು ಪರೀಕ್ಷಿಸಿದಾಗ ವಧು ಪುರುಷ ಎಂದು ತಿಳಿದು ಬಂತು. ಈತನ ಹೆಸರು ರಿಚರ್ಡ್ ತುಮ್ಶಾಬೆ, ಅವನಿಗೆ 27 ವರ್ಷ ಎಂದು ಹೇಳಲಾಗುತ್ತದೆ. ಜೊತೆಗೆ ಈತನ ಆಂಟಿ ಚಿಕ್ಕಮ್ಮನನ್ನೂ ಬಂಧಿಸಿದರು. ಈ ಇಬ್ಬರು ಸೇರಿ ಇಮಾಮರ ಮನೆಯ ಕೊಳ್ಳೆ ಹೊಡೆಯುವುದಾಗಿ ತೀರ್ಮಾನಿಸಿದ್ದರು.

LEAVE A REPLY

Please enter your comment!
Please enter your name here