ಬೀದರ್: ಜಿಲ್ಲೆಯಲ್ಲಿ ಶನಿವಾರದವರೆಗೆ ವರದಿಯಾಗಿದ್ದ 19 ಶಂಕಿತ ಕೋವಿಡ್-19 ಸೋಂಕಿತರ ರಕ್ತ ಮತ್ತು ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಆಗಿದೆ. ಇದರಿಂದ ಜಿಲ್ಲೆಯ ಜನರು ನಿಟ್ಟಿಸಿರು ಬಿಡುವಂತಾಗಿದೆ.

ಶುಕ್ರವಾರದವರೆಗೆ 14 ಮಂದಿಯ ವರದಿಗಳು ಬಂದಿದ್ದು, 5 ಜನರ ವರದಿ ಬಾಕಿ ಉಳಿದಿದ್ದವು. ಎಲ್ಲ ಶಂಕಿತ ವ್ಯಕ್ತಿಗಳು ಆಸ್ಪತ್ರೆಯ ಐಸೋಲೇಟೇಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಬ್ರಿಮ್ಸ್‌ನ ಐಸೋಲೇಶನ್‌ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯ ಆರೋಗ್ಯದಲ್ಲಿ ಏರುಪೇರು ಆಗಿತ್ತು. ಈಗ ಎಲ್ಲ ಶಂಕತರ ವರದಿಗಳು ನೆಗೆಟಿವ್ ಬಂದಿದ್ದರಿಂದ ಆತಂಕ ದೂರವಾದಂತಾಗಿದೆ.

ಜಿಲ್ಲೆಯಲ್ಲಿ ಒಟ್ಟು 574 ಜನರ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದ್ದು, 333 ಮಂದಿ 14 ದಿನಗಳ ತಮ್ಮ ಅವಧಿಯನ್ನು ಪೂರೈಸಿದ್ದಾರೆ. ಒಟ್ಟು 241 ಜನ ಗೃಹ ನಿರ್ಬಂಧ (ಹೋಮ್ ಕ್ವಾರಂಟೈನ್) ನದಲ್ಲಿ ಇದ್ದಾರೆ ಎಂದು ಜಿಲ್ಲಾ ಸವೇಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

Courtesy :Udayavani

LEAVE A REPLY

Please enter your comment!
Please enter your name here