ಗಾಂಧಿನಗರ: 2019 ಲೋಕಸಭೆ ಚುನಾವಣೆ ಫಲಿತಾಂಶ ಹೊರ ಬಂದಿದ್ದು, ಮೋದಿ ನೇತೃತ್ವದ ಬಿಜೆಪಿ ಪಕ್ಷಕ್ಕೆ ಭರ್ಜರಿ ಗೆಲುವಾಗಿದ್ದು, ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ ಮುಂದುವರೆಯುವುದು ಖಚಿತವಾಗಿದೆ.
ಮಗನ ಗೆಲುವಿನ ಬಗ್ಗೆ ಪ್ರಧಾನಿ ತಾಯಿ ಹೀರಾಬೆನ್‌ ದೇಶದ ಜನತೆಗೆ ಹಾಗೂ ಮತದಾರರಿಗೆ ಗುಜರಾತ್‌ನ ಗಾಂಧಿನಗರದ ತಮ್ಮ ನಿವಾಸದ ಹೊರಗೆ ಬಂದು ಧನ್ಯವಾದ ತಿಳಿಸಿದರು. ಮೋದಿಯವರ ತಾಯಿ ಹಿರಾಬೆನ್ ರವರ ಮುಖದಲ್ಲಿ ಸಂತೋಷ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಅವರ ಕುಟುಂಬಸ್ಥರು ಈ ಸಂದರ್ಭದಲ್ಲಿ ಜೊತೆಗಿದ್ದರು.

Leave a Reply