ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಗೋಶಾಲೆಯೊಂದರಲ್ಲಿ ದನಗಳನ್ನು ಕ್ರೂರವಾಗಿ ಅತ್ಯಾಚಾರ ಮಾಡುತ್ತಿದ್ದ ಕಾಮುಕನೊಬ್ಬನನ್ನು ಗೋಶಾಲೆಯ ಇತರ ಸಿಬ್ಬಂದಿಗಳು ಹಿಡಿದು ಗೂಸಾ ಕೊಟ್ಟು ಪೊಲೀಸರಿಗೊಪ್ಪಿಸಿದ ಘಟನೆ ವರದಿಯಾಗಿದೆ. ಆರೋಪಿ ರಾಜ್ ಕುಮಾರ್ ಎಂಬಾತ ಕರ್ತಾಲಿಯಾ ಬಾಬಾ ಆಶ್ರಮದ ಗೋಶಾಲೆಯಲ್ಲಿ ದನಗಳ ಪರಿಚಾರಿಕೆ ಮಾಡುವ ಕೆಲಸ ಮಾಡುತ್ತಿದ್ದು, ಸಿಸಿಟಿವಿಯಲ್ಲಿ ರಾಜ್ ಕುಮಾರ್ ದನಗಳನ್ನು ಅತ್ಯಾಚಾರ ಮಾಡುವ ದೃಶ್ಯ ರೆಕಾರ್ಡ್ ಆಗಿದ್ದು, ಇದನ್ನು ನೋಡಿದ ಸಿಬ್ಬಂದಿಗಳು ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದರು. ಮಂಗಳವಾರ ರಾಜ್ ಕುಮಾರ್ ನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಸಜ್ಜಾದ ಆಶ್ರಮದ ಸಿಬ್ಬಂದಿಗಳು ರಾತ್ರಿ ಅತ್ಯಾಚಾರ ಎಸಗಲು ಬಂದಾಗ ರಾಜ್ ಕುಮಾರ್‌ನನ್ನು ಹಿಡಿದು ಥಳಿಸಿ ಆ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ರಾಜ್ ಕುಮಾರ್ ಸರಣಿಯಲ್ಲಿ ಏಳು ದನಗಳನ್ನು ಅತ್ಯಾಚಾರ ಮಾಡಿದ್ದು ಕ್ಯಾಮರಾದಲ್ಲಿ ಸೆರೆಯಾಗಿದೆ.

ಆರೋಪಿ ರಾಜ್ ಕುಮಾರ್ ತಾನು ಮದ್ಯದ ಅಮಲಿನಲ್ಲಿ ಈ ಕೃತ್ಯ ಎಸಗಿದ್ದಾಗಿ ತಿಳಿಸಿದ್ದು, ನನಗೆ ಯಾವುದೂ ನೆನಪಿಲ್ಲ. ಜನರು ನನ್ನನ್ನು ಹಿಡಿದು ಥಳಿಸುವಾಗ ನನಗೆ ಪ್ರಜ್ಞೆ ಬಂದಿದ್ದಾಗಿ ಪೊಲೀಸ್ ತನಿಖೆಯಲ್ಲಿ ತಿಳಿಸಿದ್ದಾನೆ. ಆರೋಪಿಯ ವಿರುದ್ದ ಭಾರತೀಯ ದಂಡ ಸಂಹಿತೆ 376 ಮತ್ತು 511 ಪ್ರಕಾರ ಮೂಕ ಪ್ರಾಣಿ ದೌರ್ಜನ್ಯದ ಪ್ರಕರಣ ದಾಖಲಾಗಿದೆ. ಪ್ರಾಣಿಗಳ ಮೇಲೆ ನಡೆಯುವ ಅತ್ಯಾಚಾರ ಪ್ರಕರಣವು ಇದು ಮೊದಲ ಬಾರಿಗೆ ಅಲ್ಲ. ಕಳೆದ ವರ್ಷ ಜುಲೈನಲ್ಲಿ ಎಂಟುಮಂದಿ ಹರಿಯಾಣದ ಮೆವತ್ ಪ್ರದೇಶದಲ್ಲಿ ಗರ್ಭಿಣಿ ಆಡನ್ನು ಗ್ಯಾಂಗ್ ರೇಪ್ ಮಾಡಿ ಕೊಂಡಿದ್ದರು.

Leave a Reply