Free image/jpeg, Resolution: 2799x1853, File size: 1.6Mb, Orinoco Crocodile Eye macro

ಫ್ಲೋರಿಡಾ:  ವೃದ್ಧ ವ್ಯಕ್ತಿಯೊಬ್ಬರು ತನ್ನ ಸಾಕು ನಾಯಿಯನ್ನು ಮೊಸಳೆಯ ಆಕ್ರಮಣದಿಂದ ರಕ್ಷಿಸಿದ್ದಾರೆ. ನಾಯಿಯನ್ನು ಕಚ್ಚಿ ಹಿಡಿದಿದ್ದ ಮೊಸಳೆ, ನಾಯಿಯನ್ನು ಬಿಟ್ಟುಕೊಡಲು ಸಿದ್ದ ಇರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, 74 ವರ್ಷದ ವೃದ್ಧ ನದಿಗೆ ಹಾರಿ ತನ್ನ ಪ್ರಾಣವನ್ನು ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದರು. ಈ ಘಟನೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಮಾಧ್ಯಮ ವರದಿಗಳ ಪ್ರಕಾರ, 74 ವರ್ಷದ ವ್ಯಕ್ತಿಯ ಹೆಸರು ರಿಚರ್ಡ್ ವಿಲ್ಬ್ಯಾಂಕ್. ತನ್ನ ಮೂರು ತಿಂಗಳ ಸಾಕು ನಾಯಿ ಕ್ಯಾವಲಿಯರ್ ಚಾರ್ಲ್ಸ್ ಸ್ಪೈನಿಯೆಲ್ನನ್ನು ರಕ್ಷಿಸುವ ವೈರಲ್ ವೀಡಿಯೊದಲ್ಲಿ ಅವರನ್ನು ಕಾಣಬಹುದು. ಮೊಸಳೆ ರಾಕೆಟ್‌ನಂತೆ ಹೊರಬಂದು ನಾಯಿಯನ್ನು ಹಿಡಿಯುವಾಗ ತಾನು ಕೊಳದ ಮೂಲಕ ಹಾದುಹೋಗುತ್ತಿದ್ದೆ ಎಂದು ವಿಲ್ಬ್ಯಾಂಕ್ಸ್ ಸಿಎನ್‌ಎನ್‌ಗೆ ತಿಳಿಸಿದರು. ಮೊಸಳೆ ಇಷ್ಟು ವೇಗವಾಗಿ ಚಲಿಸುತ್ತದೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ.

ಲ್ಬ್ಯಾಂಕ್ಸ್ ಪ್ರಕಾರ, ಮೊಸಳೆಯನ್ನು ಹಿಡಿಯುವುದು ಅಷ್ಟು ಕಷ್ಟವಲ್ಲ, ಅದರ ದವಡೆ ತೆರೆಯುವುದು ತುಂಬಾ ಹರಸಾಹಸದ ಕೆಲಸ. ಕೊನೆಗೆ ತನ್ನ ನಾಯಿಯನ್ನು ಉಳಿಸುವಲ್ಲಿ ಅವರು ಯಶಸ್ವಿಯಾದರು. ಮಾಹಿತಿಯ ಪ್ರಕಾರ, ವೈದ್ಯರಿಂದ ಚಿಕಿತ್ಸೆಗೆ ಒಳಪಟ್ಟ ಬಳಿಕ ವಿಲ್ಬ್ಯಾಂಕ್ ರವರ ನಾಯಿ ಈಗ ತುಂಬಾ ಆರೋಗ್ಯಕರವಾಗಿದೆ.

dog

Leave a Reply