ನವದೆಹಲಿ: ಜೆಎನ್ ಯು ವಿದ್ಯಾರ್ಥಿ ಮತ್ತು ಬೋಧಕರ ಮೇಲೆ ಜ5 ರಂದು ನಡೆದಿದ್ದ ಹಿಂಸಾಚಾರದಲ್ಲಿ ಭಾಗವಹಿಸಿದ್ದ ವ್ಯಕ್ತಿಗಳ ಮೊಬೈಲ್ ಫೋನ್ ಜಪ್ತಿ ಮಾಡಿಕೊಳ್ಳುವಂತೆ ನ್ಯಾಯಾಲಯ ಪೊಲೀಸರಿಗೆ ನಿರ್ದೇಶಿಸಿದೆ. ಆರೋಪಿಗಳು ಎರಡು ವಾಟ್ಸಪ್ ಗುಂಪುಗಳ ಮೂಲಕ ನಿರ್ದೇಶನಗಳನ್ನು ನೀಡಿ, ವ್ಯವಸ್ಥಿತ ಹಿಂಸಾಚಾರ ನಡೆಸಿದ್ದರು. 34 ಜನರನ್ನು ದಾರುಣವಾಗಿ ಗಾಯಗೊಳಿಸಿದ ಈ ದಾಳಿಯಲ್ಲಿ ಒಂದು ಅಥವಾ ಎರಡೂ ಗುಂಪುಗಳಲ್ಲಿ ಸದಸ್ಯರಾಗಿರುವ ವ್ಯಕ್ತಿಗಳ ಮೊಬೈಲ್ ಫೋನ್‌ಗಳನ್ನು ತನಿಖೆಗಾಗಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ.

ಜೊತೆಯಲ್ಲೇ ಗೂಗಲ್, ವಾಟ್ಸಪ್, ಆಪಲ್ ಸಂಸ್ಥೆಗಳಿಗೂ ನೋಟಿಸ್ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಫೋಟೊಗಳು, ಮಾಹಿತಿ, ದತ್ತಾಂಶಗಳನ್ನು ಸಂಗ್ರಹಿಸಿ ಕಾನೂನು ಪ್ರಕ್ರಿಯೆಯಂತೆ ಪೊಲೀಸರಿಗೆ ನೀಡಬೇಕು ಎಂದು ಸೂಚಿಸಿದೆ.

LEAVE A REPLY

Please enter your comment!
Please enter your name here