ರಾಜಸ್ಥಾನದಲ್ಲಿ ತಾಯಿಯೊಬ್ಬಳು 6 ವಾರದ ಮಗುವನ್ನು ಮುಳುಗಿಸಿದ್ದು, ಏಕೆ ಮಾಡಿದೆ ಎಂದು ಗೊತ್ತಿಲ್ಲ ಎಂದು ಹೇಳಿದ್ದಾಳೆ. ಕೋಟಾ(ರಾಜಸ್ಥಾನ)ದಲ್ಲಿ ಮಹಿಳೆಯೊಬ್ಬಳು ತನ್ನ 6 ತಿಂಗಳ ಮಗುವನ್ನು ನೀರಿನ ಟಾಂಕಿಯಲ್ಲಿ ಮುಳುಗಿಸಿ ಕೊಂದ ಘಟನೆ ಬೆಳಕಿಗೆ ಬಂದಿದೆ. ಪೊಲೀಸರ ಪ್ರಕಾರ,ತಾನು ಗಾಢ ನಿದ್ರೆಯಲ್ಲಿ ಮಗುವನ್ನು ಮುಳುಗಿಸಿದಳು ಹಾಗೂ ಮಲಗಿದಳು ಆದರೆ ಏಕೆ ಹಾಗೆ ಮಾಡಿದಳು ಎಂದು ಆಕೆಗೇ ತಿಳಿದಿಲ್ಲ ಎಂದು ಮಹಿಳೆ ಪೋಲಿಸರಿಗೆ ತಿಳಿಸಿದ್ದಾಳೆ. ಇದರ ಮೊದಲು ಕೂಡ ಆಕೆಯ ಎರಡು ಮಕ್ಕಳು ಮೃತಪಟ್ಟಿವೆ.
ಬೋರೆಖೇಡಾ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಸ್ವರಾಸ್ವತಿ ಕಾಲೋನಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮನೆಯ ಮೇಲ್ಛಾವಣಿಯ ನೀರಿನ ತೊಟ್ಟಿಯಲ್ಲಿ ಮಗುವಿನ ತೇಲುತ್ತಿರುವ ಮೃತದೇಹವು ಪತ್ತೆಯಾಗಿತ್ತು. ರಾತ್ರಿ ನಿದ್ರೆಗೆ ಭಂಗವಾದ ನಿಟ್ಟಿನಲ್ಲಿ ರಾತ್ರಿ ನೀರಿನ ಟ್ಯಾಂಕ್ ಗೆ ಹಾಕಿ ಪುನಃ ಬಂದು ತಾಯಿ ಮಲಗಿದ್ದಾಳೆ ಎಂದು ಆರೋಪಿಸಲಾಗಿದೆ. ಮಹಿಳೆಗೆ ಯಾವುದೇ ಮಾನಸಿಕ ಖಾಯಿಲೆ ಅಥವಾ ಮಾನಸಿಕ ಅಸಂತುಲತೆ ಯಾಗಿದೆಯೇ ಎಂದು ಪರಿಶೀಲಿಸಲಾಗುತ್ತದೆ.