ಮಿಜೋರಾಂ ವಾಲಿಬಾಲ್ ತಂಡದ ಕ್ರೀಡಾಪಟುವಿನ ಫೋಟೋ ಒಂದು ವೈರಲ್ ಆಗಿದೆ. ವಾಲಿಬಾಲ್ ಪಂದ್ಯದ ವಿರಾಮದ ವೇಳೆ ತನ್ನ ಮಗುವಿಗೆ ಎದೆಹಾಲು ಉಣಿಸುವ ಮೂಲಕ ಆಟಗಾರ್ತಿ ಲಾಲ್ವೆಂಟ್ಲುವಾಂಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸ್ತನಪಾನ ಮಾಡಿಸುವ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಮೆಚ್ಚುಗೆಯ ಕಾಮೆಂಟ್ ಬಂದಿದೆ. ಟೈಕೂನ್ ವಾಲಿಬಾಲ್ ತಂಡದ ಸದಸ್ಯರಾಗಿರುವ ಲಾಲ್ವೆಂಟ್ಲುವಾಂಗಿ ಮಿಜೋರಾಂ ನಲ್ಲಿ ಸೋಮವಾರ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದ ಪಂದ್ಯದ ವಿರಾಮದ ವೇಳೆ ತನ್ನ ಏಳು ತಿಂಗಳ ಮಗುವಿಗೆ ಎದೆಹಾಲು ನೀಡಿದ್ದಾರೆ.

ಓರ್ವ ಕ್ರೀಡಾಪಟು ಮತ್ತು ತಾಯಿಯಾಗಿ ಆಕೆ ತನ್ನ ಜವಾಬ್ದಾರಿಗಳನ್ನು ಧೈರ್ಯದಿಂದ ಪ್ರದರ್ಶಿಸಿದ್ದಾರೆ ಎಂದು ಸಾಮಾಜಿಕ ನೆಟ್ಟಿಗರು ಶ್ಲಾಘಿಸಿದ್ದಾರೆ. ಅಮ್ಮ ಅಮ್ಮ ಯಾವಾಗಲೂ ಮಕ್ಕಳಿಗಾಗಿ ಕರ್ತವ್ಯ ನಿಭಾಯಿಸುತ್ತಾಳೆ ಎಂದು ಕಾಮೆಂಟ್ ಮಾಡಿದ್ದಾರೆ. ಛಾಯಾಗ್ರಾಹಕ ಮತ್ತು ಎದೆಹಾಲುಣಿಸುವ ತಾಯಿಯನ್ನು ಕೊಂಡಾಡೋಣ ಎಂದು ಇನ್ನೊಬ್ಬ ಬಳಕೆದಾರ ಬರೆದಿದ್ದಾರೆ. ಈ ಬಗ್ಗೆ ಆಟಗಾರ್ತಿಯ ಬದ್ಧತೆ ಮೆಚ್ಚುಗೆ ವ್ಯಕ್ತಪಡಿಸಿದ ಮಿಜೋರಾಂ ಕ್ರೀಡಾ ಸಚಿವರಾಬರ್ಟ್ ರೋಮವಿಯ ರೂ. 10000 ಆಟಗಾರ್ತಿಗೆ ಘೋಷಿಸಿದ್ದಾರೆ.

A stolen moment to feed her 7 month old baby in between a game was captured making it the picture mascot of the Mizoram…

Posted by Ninglun Hanghal on Monday, December 9, 2019

LEAVE A REPLY

Please enter your comment!
Please enter your name here