ಹೊಸದಿಲ್ಲಿ: ಭಾರತದ ಸೈನಿಕರು ಪಾಕಿಸ್ತಾನದ ಸೈನಿಕರ ತಲೆಗಳನ್ನು ಕತ್ತರಿಸುವುದಿದೆ. ಆದರೆ ಅವನ್ನು ಪ್ರದರ್ಶಿಸುವುದಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ರಾಷ್ಟ್ರೀಯ ವಾರ್ತಾ ಚ್ಯಾನೆಲ್‍ಗೆ ನೀಡಿದ ಸಂದರ್ಶನದಲ್ಲಿ ಸಚಿವೆ ಈ ವಿವರವನ್ನು ಬಹಿರಂಗ ಪಡಿಸಿದರು.

ಪಾಕಿಸ್ತಾನ ಎರಡು ಭಾರತದ ಸೈನಿಕರ ತಲೆ ಕತ್ತರಿಸಿದರೆ. ಅದಕ್ಕೆ ಪ್ರತಿಯಾಗಿ ಹತ್ತು ಪಾಕ್‍ ಸೈನಿಕರ ತಲೆ ಕತ್ತರಿಸಲಾಗುವುದು ಎಂದು 2014ರ ಲೋಕಸಭಾ ಚುನಾವಣೆಯ ವೇಳೆ ಬಿಜೆಪಿ ಹೇಳಿತ್ತು. ಇದಕ್ಕೆ ಸಂಬಂಧಿಸದ ಪ್ರಶ್ನೆಗೆ ಸಚಿವೆ ಪ್ರತಿಕ್ರಿಯಿಸಿ ಪಾಕಿಸ್ತಾನದ ಸೈನಿಕರ ತಲೆಗಳನ್ನು ಇಂಡಿಯನ್ ಸೈನ್ಯ ಕಡಿಯಲಿದೆ. ಆದರೆ ಅದನ್ನು ಪ್ರದರ್ಶಿಸಲಾಗುವುದಿಲ್ಲ ಎಂದು ಉತ್ತರ ನೀಡಿದರು.

ಭಾರತದ ಸೈನ್ಯದ ವಿಜಯವನ್ನು ಬಹಿರಂಗವಾಗಿ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ನಮ್ಮ ಸೈನಿಕರು ಪ್ರತ್ಯುತ್ತರ ನೀಡುತ್ತಿದ್ದಾರೆ ಎಂದು ಮಾತ್ರ ನನ್ನಿಂದ ಹೇಳಲು ಸಾಧ್ಯವಿದೆ. ಯಾವ ದಾಳಿಯನ್ನು ಭಾರತ ಸೈನ್ಯ ಜವಾಬ್ದಾರಿ ಪ್ರಜ್ಞೆಯಿಂದ ಎದುರಿಸಲು ಸಮರ್ಥವಿದೆ ಎಂದು ಸಚಿವೆ ಹೇಳಿದರು.

2016ರಲ್ಲಿ ಅತಿಕ್ರಮಿತ ಕಾಶ್ಮೀರದಲ್ಲಿ ನಡೆಸಲಾಧ ಮಿಂಚಿನ ದಾಳಿಯಲ್ಲಿಭಾರತದ ಸೈನ್ಯ ಅವರಿಗೆ ಒಂದು ಪಾಠ ಕಲಿಸಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಪಾಕಿಸ್ತಾನದ ಭಯೋತ್ಪಾದಕರನ್ನು ಭಾರತಕ್ಕೆ ನುಸಳಲು ಅನುಮತಿಸುವುದಿಲ್ಲ. ಗಡಿಯಲ್ಲಿಅವರನ್ನು ನಿರ್ಮೂಲಿಸಲಾಗುತ್ತದೆ ಎಂದು ಸಚಿವೆ ಹೇಳಿದರು.

Leave a Reply