ಗುಜರಾತಿನ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ 10 ಮಂದಿ ಶಾಸಕರೊಂದಿಗೆ ಬಿಜೆಪಿಯನ್ನು ತೊರೆಯಲು ಸಿದ್ಧರಾಗಿದ್ದರೆ, ನಾನು ಕಾಂಗ್ರೆಸ್ಗೆ ಮಾತನಾಡಿ ಅವರಿಗೆ ಉನ್ನತ ಸ್ಥಾನವನ್ನು ಸಿಗುವಂತೆ ಪ್ರಯತ್ನಿಸುತ್ತೇನೆ ಎಂದು ಗುಜರಾತ್ನ ಸಾರಂಗ್ಪುರದ ಎಎನ್ಐಗೆ ಹಾರ್ದಿಕ್ ಪಟೇಲ್ ಹೇಳಿದರು.
ವಿತ್ತ, ನಗರಾಭಿವೃದ್ಧಿ, ಪೆಟ್ರೋಲಿಯಂ ಖಾತೆಗಳು ಕೈ ತಪ್ಪಿರುವುದಕ್ಕೆ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ಅಸಮಾಧಾನಗೊಂಡಿರುವುದು ಅವರ ಆಪ್ತ ಮೂಲಗಳಿಂದ ತಿಳಿದು ಬಂದಿದ್ದು, ಅವರಿಗೆ ಸರಿಯಾದ ಸ್ಥಾನ ಬಿಜೆಪಿಯಲ್ಲಿ ಕೊಡುತ್ತಿಲ್ಲ ಎಂಬ ಚರ್ಚೆಯ ಮಧ್ಯೆ ಹಾರ್ದಿಕ್ ಪಟೇಲ್ ಹೇಳಿಕೆ ನೀಡಿದ್ದಾರೆ.
ಹಿಂದಿನ ವಿಜಯ್ ರೂಪಾನಿ ಸರ್ಕಾರದಲ್ಲಿ ನಿತಿನ್ ಪಟೇಲ್ ಹಣಕಾಸು, ಪೆಟ್ರೋಕೆಮಿಕಲ್ಸ್, ನಗರಾಭಿವೃದ್ಧಿ ಮತ್ತು ನಗರ ವಸತಿ, ರಸ್ತೆಗಳು ಮತ್ತು ಕಟ್ಟಡಗಳು, ಕ್ಯಾಪಿಟಲ್ ಪ್ರಾಜೆಕ್ಟ್, ನರ್ಮದಾ ಮತ್ತು ಕಾಲ್ಪಸರ್ ಮುಂತಾದ ಭಾರೀ ವಿಭಾಗಗಳನ್ನು ಹೊಂದಿದ್ದರು.