ಹೊಸದಿಲ್ಲಿ: ರಾಜ್ಯಗಳಿಗೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಿಎಸ್‍ಪಿ ಅಧ್ಯಕ್ಷೆ ಮಾಯಾವತಿ ಹೇಳಿದರು. ಮಧ್ಯಪ್ರದೇಶ, ರಾಜಸ್ತಾನಗಳಲ್ಲಿ ಚುನಾವಣೆಯಲ್ಲಿ ಬಿಎಸ್‍ಪಿ ಏಕೈಕ ಪಕ್ಷವಾಗಿ ಯಾರೊಂದಿಗೂ ಸೇರೆದ ಚುನಾವಣೆ ಎದುರಿಸಲಿದೆ ಎಂದು ಮಾಯಾವತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಿಧಾಸಭಾ,ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಖ್ಯದಲ್ಲಿ ಸ್ಪರ್ಧಿಸಬೇಕೆಂದು ಪಾರ್ಟಿ ಬಯಸಿತ್ತು. ಅದರೆ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಬಿಎಸ್ಪಿಯೊಂದಿಗೆ ಸೇರಿ ಸ್ಪರ್ಧಿಸುವ ಬಯಸಿಲ್ಲ. ಆದ್ದರಿಂದ ಮೈತ್ರಿಯಲ್ಲಿ ತನಗೆ ಆಸಕ್ತಿಯಿಲ್ಲ ಎಂದು ತಿಳಿಸಿದ್ದಾರೆ ಎಂದು ಮಾಯಾವತಿ ಆರೋಪಿಸಿದರು.
ಇದೇವೇಳೆ, ಸಖ್ಯ ಯತ್ನದಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಪ್ರಾಮಾಣಿಕರಿದ್ದಾರೆ. ಆದರೆ ಕಾಂಗ್ರೆಸ್ ಪಾರ್ಟಿ ಅಹಂಭಾವದಿಂದ ವರ್ತಿಸುತ್ತಿದೆ. ಬಿಜೆಪಿಯನ್ನು ಏಕಪಕ್ಷವಾಗಿ ಸ್ಪರ್ಧಿಸಿ ಸೊಲಿಸಬಹುದು ಎಂದು ಅವರ ಲೆಕ್ಕಾಚಾರ. ಆದರೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸವನ್ನು ಜನರು ಮರೆತಿಲ್ಲ ಎನ್ನುವುದನ್ನು ಅವರು ಈಗ ನೆನೆಯುತ್ತಿಲ್ಲ ಎಂದು ಮಾಯಾವತಿ ಆರೋಪಿಸಿದರು.
ಕಾಂಗ್ರೆಸ್‍ನಲ್ಲಿ ಆಂತರಿಕ ಬದಲಾವಣೆಯಾಗಿಲ್ಲ. ಜಾತಿ,ಸಮುದಾಯಕ್ಕೆ ಆದ್ಯತೆ ಈಗಿದೆ. ಬಿಜೆಪಿಗಿಂತ ಸಖ್ಯ ಪಕ್ಷಗಳನ್ನೆ ಸೋಲಿಸಲು ಕಾಂಗ್ರೆಸ್ ಆದ್ಯತೆನೀಡುತ್ತಿದೆ. ಕಾಂಗ್ರೆಸ್ ನಾಯಕರಿಗೆ ಎಂಫೋರ್ಸ್‍ಮಂಟ್ ನಿರ್ದೇಶಕರು, ಸಿಬಿಐಯಂತಹ ಏಜೆನ್ಸಿಯ ಭಯವಿದೆ ಎಂದು ಮಾಯಾವತಿ ಹೇಳಿದರು.