ಯುಎಇ‌ಯಲ್ಲಿರುವ ಅನಿವಾಸಿಗಳು ಇನ್ನು ಮುಂದೆ ಎಚ್ಚರವಾಗಿರಿ:‌ ಇಂಟರ್ನೆಟ್ ವೀಡಿಯೋ, ಆಡಿಯೋ ಕರೆ ಮಾಡಿದರೆ ಕೋಟಿಯವರೆಗೆ ದಂಡ

ದುಬಾಯ್: ಯುಎಯಿಯಲ್ಲಿರುವ ಅನಿವಾಸಿಗಳು ಇನ್ನುಮುಂದೆ ಕಾನೂನು ಉಲ್ಲಂಘಿಸಿ ವಿಪಿಎನ್ ಬಳಸಿ ವಿಡಿಯೋ ಕರೆ, ಆಡಿಯೋ ಕರೆ ಅಥವಾ ಡಯಾಲರ್‌ ಮುಖಾಂತರ ಇಂಟರ್ನೆಟ್ ಕರೆ ಮಾಡಿದರೆ ಶಿಕ್ಷಾರ್ಹ ಜೊತೆಗೆ ಐದು ಸಾವಿರ ದಿರ್ಹಾಮ್‌ನಿಂದ ಎರಡು ಮಿಲಿಯನ್ ದಿರ್ಹಾಮ್ ವರೆಗೆ ದಂಡ ವಿಧಿಸುವುದಾಗಿ ಯುಎಯಿ ಸರಕಾರ ಎಚ್ಚರಿಕೆ ನೀಡಿದೆ.

ಯುಎಯಲ್ಲಿ ಸ್ಕೈಪ್, ಐಎಮ್‌ಓ, ವಾಟ್ಸಾಪ್, ಫೇಸ್‌ಬುಕ್‌, ವೈಬರ್ ಇನ್ನಿತರ ಆಪ್‌ಗಳನ್ನು ಬ್ಲಾಕ್ ಮಾಡಲಾಗಿತ್ತು. ಆದರೆ ಇಲ್ಲಿರುವ ಕೆಲ ಅನಿವಾಸಿಗಳು‌ ಕಾನೂನು ಉಲ್ಲಂಘನೆ ನಡೆಸಿ ವಿಪಿಎನ್ ಆಪ್ ತೆರೆದು ವಿಡಿಯೋ, ಆಡಿಯೋ ಕರೆ, ಅಥವಾ ಬ್ಲಾಕ್ ಮಾಡಿರುವ ಸೈಟ್‌ಗಳನ್ನು ತೆರೆಯುತ್ತಾರೆ ಎಂದು ಟಿಆರ್‌ಎ ಯುಎಯಿ ಟೆಲಿಕಾಂ ಸಂಸ್ಥೆ ಹೇಳಿದೆ. ಇದರಿಂದ ಇಲ್ಲಿನ ಟೆಲಿಕಾಂ ಸಂಸ್ಥೆಗಳಾದ ಈತ್‌ಸಲಾತ್, ಡು ಟೆಲಿಕಾಂ ಸಂಸ್ಥೆಗಳಿಗೆ ಬಾರಿ ನಷ್ಟ ಉಂಟಾಗುತ್ತಿದೆ ಹಾಗಾಗಿ ಈ ಕಾನೂನು ಜಾರಿಗೆ ತಂದಿದ್ದೇವೆ ಎನ್ನುತ್ತಾರೆ.

ವಿಡಿಯೋ, ಆಡಿಯೋ ಕರೆ ಹೇಗೆ ಮಾಡಬಹುದು?

ಎಲ್ಲ ರೀತಿ ಒಳ‌ ಹಾಗು ಹೊರ ಇಂಟರ್ನೆಟ್ ಕರೆಗಳನ್ನು ನಿಷೇಧಿಸಿರುವ ಟೆಲಿಕಾಂ ಸಂಸ್ಥೆ ಇದೀಗ BOTIM ಎಂಬ ಹೆಸರಿನ ಹೊಸ ಆ್ಯಪನ್ನು ಬಿಡುಗಡೆಗೊಳಿಸಿದೆ. ಈ ಆ್ಯಪ್‌ ಲಾಗಿನ್ ಮಾಡಿ ಈತ್‌ಸಲಾತ್ ಅಥವಾ ಡು ಸಂಸ್ಥೆಯ Voucherಗೆ Subscribe ಮಾಡಬೇಕು. ‌ವೈಫೈ ಬಳಕೆದಾರರು100 ದಿರ್ಹಾಮ್, ಸಿಮ್ ಸಿಮ್‌ ಕಾರ್ಡ್ ಮುಖಾಂತರ ಡಾಟ ಬಳಕೆದಾರರು 50 ದಿರ್ಹಾಮ್ ಪಾವತಿಸಬೇಕು. ಇದರ ಹೊರತಾಗಿ ಅನಿವಾಸಿಗಳಿಗೆ‌ ವಿಡಿಯೋ, ಆಡಿಯೋ ಕರೆ ಮಾಡಲು ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.

Leave a Reply