
ದೇಶದಲ್ಲಿ ಈಗ ನೂರು ವಿಮಾನ ನಿಲ್ದಾಣಗಳಿವೆ. ಇದರಲ್ಲಿ ಮೂವತ್ತೈದು ವಿಮಾನ ನಿಲ್ದಾಣಗಳನ್ನು ಕಳೆದ ನಾಲ್ಕು ವರ್ಷಗಳಲ್ಲಿ ಉದ್ಘಾಟಿಲಾಗಿದೆ. 67 ವರ್ಷದ ಸ್ವತಂತ್ರ ಬಾರತದ ಇತಿಹಾಸದಲ್ಲಿ ಅಂದರೆ 2014ರ ವರೆಗೆ ಕೇವಲ 65 ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ನಾವು ವರ್ಷಕ್ಕೆ ಸರಾಸರಿ ಒಂಭತ್ತರಂತೆ ವಿಮಾನ ನಿಲ್ದಾಣ ಮಾಡಿದ್ದೇವೆ” ಎಂದು ಪ್ರಧಾನ ಮಂತ್ರಿ ಮೋದಿಯವರು ಸಿಕ್ಕಿಂ ವಿಮಾನ ನಿಲ್ದಾಣವನ್ನು ಉದ್ಘಾಟಿಸುತ್ತಾ ಹೇಳಿದ್ದರು.
ಆದರೆ 2014ರ ವರೆಗೆ ದೇಶದಲ್ಲಿ 125 ವಿಮಾನ ನಿಲ್ದಾಣಗಳಿತ್ತು ಎಂಬುದನ್ನು ಸಿವಿಲ್ ಎವಿಯೇಶನ್ ಸಚಿವಾಲಯ ಸ್ಪಷ್ಟಪಡಿಸಿದೆ. 2017/18 ರ ವಾರ್ಷಿಕ ಲೆಕ್ಕಾಚಾರ ಪ್ರಕಾರ ಏರ್ ಪೋರ್ಟ್ ಅಥೋರಿಟಿ ಆಫ್ ಇಂಡಿಯಾದ ಅಧೀನದಲ್ಲಿ 129 ವಿಮಾನ ನಿಲ್ದಾಣಗಳಿವೆ. ಇದರಲ್ಲಿ 129 ವಿಮಾನ ನಿಲ್ದಾಣಗಳು ಸಕ್ರಿಯವಾಗಿದೆ. ಉಳಿದ 28 ಸಂಪೂರ್ಣವಾಗಿ ಕಾರ್ಯಾಚರಿಸಲು ಸಜ್ಜುಗೊಂಡಿಲ್ಲ. 2014 ರಿಂದ 2018ರ ನಡುವೆ ಕೇವಲ 7 ವಿಮಾಣ ನಿಲ್ದಾಣಗಳು ಸಕ್ರಿಯವಾಗಿ ಕಾರ್ಯಾಚರಿಸುತ್ತಿದೆ. ಪ್ರಧಾನಿಗಳು 35 ವಿಮಾನ ನಿಲ್ದಾಣಗಳನ್ನು ನಿರ್ಮಿಸಿದ್ದೇವೆ ಎಂದು ಹೇಳಿದ್ದನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡದ್ದನ್ನು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.