ನವದೆಹಲಿ: ಎನ್‌ಆರ್‌ಸಿ ಕುರಿತು ಕೇಂದ್ರ್ರ ಗೃಹ ಸಚಿವ ಶ್ರೀ ಅಮಿತ್ ಶಾ ರವರ ಹೇಳಿಕೆಗೆ ಮುಸ್ಲಿಂ ಸಮುದಾಯದದಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಹೇಳಿಕೆ ಭಾರತದ ಸಂವಿಧಾನದಲ್ಲಿ ಖಾತರಿಪಡಿಸಿದ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಜಮಿಯತ್-ಉಲ್-ಉಲೇಮಾ-ಎ-ಹಿಂದ್ ಪ್ರಧಾನ ಕಾರ್ಯದರ್ಶಿ ಮೌಲಾನಾ ಮಹಮೂದ್ ಮದನಿ ಹೇಳಿದ್ದಾರೆ.

ನಾಗರಿಕರನ್ನು ಅವರ ಧಾರ್ಮಿಕ ಗುರುತಿನ ಆಧಾರದ ಮೇಲೆ ಗುರುತಿಸುವುದು ಭಾರತದ ಸಂವಿಧಾನದ 14 ಮತ್ತು 15 ನೇ ವಿಧಿಗಳನ್ನು ಉಲ್ಲಂಘಿಸುತ್ತದೆ ಎಂದು ಅವರು ಹೇಳಿದರು.

ಶ್ರೀ ಅಮಿತ್ ಷಾ ಅವರ ಹೇಳಿಕೆಯು ಮುಸ್ಲಿಮರನ್ನು ಮಾತ್ರ ಬಂಧನ ಶಿಬಿರಗಳಲ್ಲಿ ಇಡಲಾಗುವುದು ಎಂದು ಸ್ಪಷ್ಟವಾಗಿ ಸೂಚಿಸುತ್ತದೆ. ಒಂದು ವೇಳೆ ಹಾಗೆ ಸಂಭವಿಸಿದಲ್ಲಿ, ಭಾರತದ ಚಿತ್ರಣವು ಇಡೀ ಜಗತ್ತಿನ ಮುಂದೆ ಕಳಂಕಿತವಾಗುತ್ತದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here