ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಹಲವಾರು ಮಂದಿಗೆ ದುಬಾರಿ ದಂಡ ಕಟ್ಟಬೇಕಾದ ಪರಿಸ್ಥಿತಿ ಬಂದಿತ್ತು. ಗಾಜಿಯಾಬಾದ್ನ ನಿವಾಸಿಯೊಬ್ಬರ ಮನೆಗೆ ಈ ತಿಂಗಳು 15 ಚಲನ್‌ ಬಂದಿದೆ ವಿಶೇಷವೆಂದರೆ ಅವರು ತನ್ನ ವಾಹನವನ್ನು ಕಳೆದ ತಿಂಗಳು ರೋಡಿಗೆ ಇಳಿಸಿಯೇ ಇಲ್ಲ.ಆದರೂ ಆವರಿಗೆ ದಂಡ ವಿಧಿಸಲಾಗಿದೆ.
ಮೀರತ್ ಪ್ರದೇಶದ ನಿವಾಸಿ ಅರುಣ್ ಶರ್ಮಾ ರವರು ಈ ಚಲನ್ ಗಳನ್ನು ಆಘಾತಗೊಂಡಿದ್ದಾರೆ. ಈ ಬಗ್ಗೆ ಅವರು ದೆಹಲಿ ಮತ್ತು ಗಾಜಿಯಾಬಾದ್ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಇತ್ತೀಚಿನ ವರದಿಯಲ್ಲಿ ತಿಳಿಸಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಮಾತ್ರವಲ್ಲ, ಎಲ್ಲಾ ಚಲನ್‌ಗಳನ್ನು ಸಲ್ಲಿಸುವಂತೆ ಪೊಲೀಸರು ನಿರ್ದೇಶನ ಮಾಡಿದ್ದಾರೆ.

ಶರ್ಮಾ ರವರು ಈ ಬಗ್ಗೆ ಸ್ವತಃ ತನಿಖೆ ಮಾಡಲು ಪ್ರಾರಂಭಿದಾಗ ಯಾರೋ ಅವರ ವಾಹನದ ನಂಬರ್ ಪ್ಲೇಟ್‌ನ ನಕಲನ್ನು ಬಳಸುತ್ತಿದ್ದಾರೆಂಬ ಸತ್ಯ ಅವರಿಗೆ ತಿಳಿದುಬಂದಿದೆ. ಆದರೆ ಕ್ಯಾಮರಾದ ಮೂಲಕ ದಂಡ ಇವರ ಮನೆಗೆ ಬರುತ್ತಿದೆ. ಬಳಿಕ ಪೋಲೀಸರ ಸಹಾಯದಿಂದ ಶರ್ಮಾರವರು ನಕಲಿ ನಂಬರ್ ಪ್ಲೇಟ್ ಬಳಸುತ್ತಿದ್ದ ವ್ಯಕ್ತಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಹೀಗೆ ನಕಲಿ ನಂಬರ್ ಪ್ಲೇಟ್ ಬಳಸುವ ಪ್ರಕರಣ ಇದೇ ಮೊದಲಲ್ಲ, ಹಿಂದೆಯೂ ಸಾಕಷ್ಟು ಬಾರಿ ಇಂತಹ ಪ್ರಕರಣಗಳು ಬೆಳಕಿಗೆ ಬಂದಿದೆ. ಆದ್ದರಿಂದ ನಾವು ಮಾಡದ ತಪ್ಪಿಗೆ ಸುಮ್ಮನೆ ದಂಡ ಕಟ್ಟ ಬೇಕಾಗುತ್ತದೆ. ಈ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

LEAVE A REPLY

Please enter your comment!
Please enter your name here