ಮುಂಬೈ : ರಾಜಧಾನಿ ನವದೆಹಲಿಯಿಂದ ಅಮೆರಿಕಾ, ಕೆನಡಾಗೆ ವಿಮಾನ ಪ್ರಯಾಣಕ್ಕೆ ಕೇವಲ 13499 ರೂಪಾಯಿ ಮಾತ್ರ ಎಂಬ ಬಂಪರ್ ಆಫರ್ ಅನ್ನು ಐಸ್ ಲ್ಯಾಂಡ್ ಮೂಲದ ವಿಮಾನಯಾನ ಸಂಸ್ಥೆ ಘೋಷಿಸಿದೆ.

ವಾವ್ ಏರ್ ಎಂಬ ವಿಮಾನ ಯಾನ ಸಂಸ್ಥೆ ತನ್ನ ಆಫರ್ ಭಾಗವಾಗಿ ಕೇವಲ 13499 ರೂಪಾಯಿಗೆ ದೆಹಲಿಯಿಂದ ಶಿಕಾಗೋ, ಒರ್ಲ್ಯಾಂಡೊ, ಡೆಟ್ರಾಯಿಟ್, ಸ್ಯಾನ್ ಫ್ರಾನ್ಸಿಸ್ಕೊ, ಬೋಸ್ಟನ್, ಪಿಟ್ಸ್ಬರ್ಗ್, ಲಾಸ್ ಏಂಜಲೀಸ್ ಹೀಗೆ ಹಲವಾರು ನಗರಗಳಿಗೆ ಪ್ರಯಾಣಿಸಬಹುದು ಎಂದು ಹೇಳಿದೆ.

ಸೂಟ್ ಕೇಸ್ ಇನ್ನಿತರ ಬ್ಯಾಗೇಜ್ ಹೊರತು ಪಡಿಸಿ ಲ್ಯಾಪ್ ಟಾಪ್ ಬ್ಯಾಗ್ ಅಥವಾ ಆಫೀಸ್ ಬ್ಯಾಗ್ ಮಾತ್ರ ಕೊಡೊಯ್ಯಬಹುದು ಎಂದು ಹೇಳಿದೆ. ಸುಮಾರು ೧೨ ಗಂಟೆಗಳ ಈ ಪ್ರಯಾಣದಲ್ಲಿ ಯಾವುದೇ ತಿಂಡಿ ತಿನಿಸು ನೀಡುವುದಿಲ್ಲ. ಈ ತಿಂಗಳ ೧೮ ರಿಂದ ೨೮ ರವರೆಗೆ ಈ ಟಿಕೆಟ್ ಮಾರಾಟ ಆಫ಼ರ್ ಇದೆ ಎಂದು ಸಂಸ್ಥೆ ಹೇಳಿದೆ.

Leave a Reply